Thursday, July 7, 2022

Udyavara Nagesh Kumar - ಉಮೇಶ್ ಶೆಟ್ಟಿ ಹೇರೂರು ಅವರಿಗೆ ಶ್ರದ್ದಾಂಜಲಿ


 ಈ ಸಾವು ಎಷ್ಟು ಕ್ರೂರ ...ಅರಗಿಸಲಾಗುತ್ತಿಲ್ಲ.ಕಣ್ಣು ಮುಚ್ಚಿದಾಗ ನಾಗೇಶಣ್ಣ ಎಂದು ಬಾಯಿತುಂಬ ಕರೆಯುವ ಅವರ ಮುಖ..ಪ್ರೀತಿ ತುಂಬಿ ಮಾತನಾಡುವ ಪತ್ನಿ ಸ್ನೇಹಾಳ ಮುಖ .. ನಾಗೇಶ್ ಮಾಮ ಎಂದು ಕೆರೆಯುವ ಶ್ರದ್ಧಾ, ಶ್ರೇಯಾ ಇಬ್ಬರು ಹೆಣ್ಣು ಮಕ್ಕಳ ಮುದ್ದು ಮುಖ ಎದುರು ಬರುತ್ತೆ. ಸಹಿಸಲಾಗುತ್ತಿಲ್ಲ ...

ಹೌದು ಮಿತ್ರ #ಉಮೇಶ್_ಶೆಟ್ಟಿ_ಹೇರೂರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ... ಈ ಸುದ್ದಿ ಸುಳ್ಳಾಗಲಿ ಎಂದು ಮನಸ್ಸು ಕೂಗುತ್ತಿದೆ.. ಅದರೆ ಅದು ಸಾಧ್ಯವೇ... ನನ್ನ ಉಮೇಶ್ನ ಗೆಳೆತನ ಆವರು ಕಾಲೇಜಿನಲ್ಲಿ ಇರುವಾಗಲೇ ಪ್ರಾರಂಭವಾಯಿತು ..ಕಾರಣ ನನ್ನಣ್ಣ ಮಂಜು .. ಅವರು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯೊಂದರ ಕಾರ್ಯಕರ್ತರಾಗಿ ದುಡಿಯುವ ಹೊತ್ತು ನಾನೂ .. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾದೂದರಿಂದ ಗೆಳೆತನದ ಬಂಧ ಗಟ್ಟಿಯಾಯಿತು ..ಅದರೊಂದಿಗೆ ಅವರಿಗೂ ಕೂಡಾ ಆಧುನಿಕ ರಂಗಭೂಮಿಯತ್ತ ಒಲವಿತು ..
ಅವರನ್ನು ಉಡುಪಿ ರಥಬೀದಿ ಗೆಳೆಯರು ನಾಟಕದಲ್ಲಿ ಭಾಗವಹಿಸುವಂತೆ ಮಾಡಿದೆ.. ರಾಜಕೀಯ ಮತ್ತು ರಂಗ ಚಟುವಟಿಕೆ ಕಾರಣದಿಂದ ತೀರ ಹತ್ತಿರ ಆದೆವು ..ರಥ ಬೀದಿ ಗೆಳೆಯರ ಅಗ್ನಿ ಮತ್ತು ಮಳೆ , ಸಿರಿಸಂಪಿಗೆ ,ಮಿಸ್ಟೇಕ್ , ತುಕ್ರನ ಕನಸು ಮೊದಲಾದ ನಾಟಕಗಳಲ್ಲಿ ಪಾತ್ರವಹಿಸಿದರು ಉಮೇಶ್ .ಎಲ್ಲರಿಗೂ ಹತ್ತಿರವಾದರು .. ಅತ್ಯಂತ ಸ್ನೇಹಪೂರ್ಣ ನಡೆಯಿಂದ ಬದುಕುತ್ತಿದ್ದ ಉಮೇಶ್ ಶೆಟ್ಟಿ ರಥಬೀದಿ ಗೆಳೆಯರ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದರೂ.ಅದಕ್ಕಿಂತಲೂ ಮಿಗಿಲಾಗಿ ಪ್ರೀತಿ ತುಂಬಿದ ಒಬ್ಬ ಅಪ್ಪಟ ಜೀವನ ಪ್ರೀತಿಯ ಮನುಷ್ಯನಾಗಿದ್ದರು
ರಾಜಕೀಯದಲ್ಲೂ ಮೂರು ಬಾರಿ ಪಂಚಾಯತ್ ಸದಸ್ಯರಾಗಿ , ಉಪಾಧ್ಯಕ್ಷರಾಗಿ.. ಪಕ್ಷದ ನಾಯಕರಾಗಿ ಜನ ಸೇವೆಯಲ್ಲಿ ತೊಡಗಿ ಕೊಂಡ ಶೆಟ್ಟರು ಅಲ್ಲೂ ತಮ್ಮ ಛಾಪನ್ನು ಮೂಡಿಸಿದವರು .
ಒಂದೆರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಲ್ಲಿ ಬಳಲುತಿದ್ದ ಉಮೇಶ್ ತಿರುಗಾಡುವಷ್ಟು ಆರೋಗ್ಯವಾಗಿದ್ದರು .ಆದರೆ ಇಂದು ಇನ್ನು ಸಾಕೂ ಅಂತ ಹಟತ್ತಾಗಿ ನಡೆದೇಬಿಟ್ಟರು.
ಅವರ ಅಗಲಿಕೆಯ ನೋವು ತಡೆದು ಕೊಳ್ಳು ಶಕ್ತಿ ಅವರ ಮಡದಿ ಮತ್ತು ಮಕ್ಕಳಿಗೆ ಬರಲಿ ಎಂದರೆ ಅದು ಕ್ಲೀಷೆಯಾಗುತ್ತದೆ.. ಯಾಕೆಂದರೇ ನನಗೇ ನೋವು ತಡೆದು ಕೊಳ್ಳು ಶಕ್ತಿ ಇದೆ ಅಂತ ಅನಿಸೋದಿಲ್ಲ ..
ಆದರೂ ಅವರ ನೋವಲ್ಲಿ ಜತೆ ಇದ್ದೇನೆ ಎಂದು ಮಾತ್ರ ಕಷ್ಟದಲ್ಲಿ ಹೇಳ ಬಲ್ಲೆ ..
ಶೆಟ್ರೆಈ ಮಳೆಗಾಲದಲ್ಲಿ ರಥ ಬೀದಿಯಿಂದ ನಾಟಕ ಮಾಡೋಣ ವಾಪಾಸ್ ಬನ್ನಿ ನಿಮಗೆ ಸಾಧ್ಯ ಇದ್ದರೆ.....
Ashoka Vardhana, Raviraj Hp and 83 others
41 Comments
1 Share
Like
Comment
Share

Muraleedhara upadhya Hiriadka - ಉಡುಪಿ ಜಿಲ್ಲಾ ರಂಗಮಂದಿರ ?

ಸಂಪಾದಕೀಯ | ನಾಟಕ ಪ್ರದರ್ಶನಕ್ಕೆ ಅಡ್ಡಿ: ಕಿಡಿಗೇಡಿಗಳಿಗೆ ಕಡಿವಾಣ ಅಗತ್ಯ | Prajavani

ಸಂಪಾದಕೀಯ | ನಾಟಕ ಪ್ರದರ್ಶನಕ್ಕೆ ಅಡ್ಡಿ: ಕಿಡಿಗೇಡಿಗಳಿಗೆ ಕಡಿವಾಣ ಅಗತ್ಯ | Prajavani

Saturday, April 2, 2022

ಉಡುಪಿ ಜಿಲ್ಲಾ ರಂಗಮಂದಿರ ನಿರ್ಮಾಣ - ರೂ. 2 ಕೋಟಿ ಅನುದಾನ ಬಿಡುಗಡೆ -

ಉಡುಪಿ ಜಿಲ್ಲಾ ರಂಗಮಂದಿರ ನಿರ್ಮಾಣ - ರೂ. 2 ಕೋಟಿ ಅನುದಾನ ಬಿಡುಗಡೆ - News Karkala

AN ENEMY OF THE PEOPLE (BBC - 1980 with Robert Urquhart)ಜನ ಶತ್ರು

‘ಜನ ಶತ್ರು’ ನಾಟಕ ಪ್ರದರ್ಶನ | Prajavani

ರಂಗಶಂಕರದಲ್ಲಿ ಇಂದು ‘ಜನ ಶತ್ರು’ ನಾಟಕ ಪ್ರದರ್ಶನ | Prajavani

Dr Raghavendra Rao -ಭಾಷಾಂತರ ಸಾಹಿತ್ಯಕ್ಕೆ ಬನ್ನಂಜೆ ಗೋವಿಂದಾಚಾರ್ಯರ ಕೊಡುಗೆ / ...

Sagri Raghavendra Upadhyaya--ಸರ್ವಮೂಲ ಗ್ರಂಥಗಳ ಸಂಪಾದಕ ಬನ್ನಂಜೆ ಗೋವಿಂದಾಚಾರ್ಯರು

Akshitha K Shetty -ಪಾ ವೆಂ ಆಚಾರ್ಯ - ರಾಮದೇವೆರೆ ಸತ್ಯ { ತುಳು ಕವನ }

ರಥಬೀದಿ ಗೆಳೆಯರು ವತಿಯಿಂದ ಪಾ.ವೆಂ.ಆಚಾರ್ಯ ಸ್ಮಾರಕ ತುಳು ಕವನ ವಾಚನ ಸ್ಪರ್ಧೆ - 2022

ರಥಬೀದಿ ಗೆಳೆಯರು ವತಿಯಿಂದ ಪಾ.ವೆಂ.ಆಚಾರ್ಯ ಸ್ಮಾರಕ ತುಳು ಕವನ ವಾಚನ ಸ್ಪರ್ಧೆ - Varthabharati

Meti Mudiyappa -ಮೇಟಿ ಮುದಿಯಪ್ಪ- ಉಡುಪಿಯ ಗೆಳೆಯರ ಸವಿ ನೆನಪಿನಲ್ಲಿ

Muraleedhara upadhya Hiriadka - ಉಡುಪಿ ಜಿಲ್ಲಾ ರಂಗಮಂದಿರ ?

META Awards 2019 | Agarbatti { Direction -Swathi Dubey }

Muraleedhara upadhya - ವಿಶ್ವ ಜಲದಿನ , ಉಡುಪಿಗೆ ವಾರಾಹಿ ನೀರು , ಸಮುದ್ರದಿಂದ ಕ...

ವಿ ದ ಪೀಪಲ್‌ ಆಫ್‌ ಇಂಡಿಯಾ ನಾಟಕಕ್ಕೆ ಮನಸೋತ ಪ್ರೇಕ್ಷಕರು. We the people of Indi...

Rathabeedhi Geleyaru { R } Murari Ballal , K. S.Kedlaya Memorial Drama ...