Saturday, March 31, 2018

ರಥಬೀದಿ ಗೆಳೆಯರು , ರಂಗೋತ್ಸವದಲ್ಲಿ " ಮದರ್ ಕರೇಜ್ "

ಮುರಾರಿ-ಕೆದ್ಲಾಯ ರಂಗೋತ್ಸವ
ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ
ಸಂಜೆ ಗಂಟೆ 7.00
31. 03.2018 ಶನಿವಾರ ಪ್ರದರ್ಶನಗೊಳ್ಳುವ ನಾಟಕ
ಪಾದುವ ರಂಗ ಅಧ್ಯಯನ ಕೇಂದ್ರ, ಮಂಗಳೂರು ಕಲಾವಿದರಿಂದ
"ಮದರ್ ಕರೇಜ್"
ರಚನೆ: ಬ್ರಟೋಲ್ಟ್ ಬ್ರೆಕ್ಟ್, ಕನ್ನಡಕ್ಕೆ : ಲಿಂಗದೇವರು ಹಳೆಮನೆ
ನಿರ್ದೇಶನ: ಪಿ.ಬಿ.ಸತೀಶ್ ನೀನಾಸಂ
.*"ಮದರ್ ಕರೇಜ್"* ಜಗತ್ತಿನ ಪ್ರಮುಖ ನಾಟಕಗಳಲ್ಲಿ ಒಂದು. ಇದು ಯುದ್ಧ ವಿರೋಧಿ ನಾಟಕ. ಯುದ್ದವನ್ನು ವಸ್ತುವಾಗಿಟ್ಟುಕೊಂಡು ಬ್ರೆಕ್ಟ್ ಬರೆದ ಪ್ರಥಮ ನಾಟಕವೂ ಹೌದು.
ಬ್ರೆಕ್ಟ್ *'ಮದರ್ ಕರೇಜ್*' ನಾಟಕವನ್ನು ಬರೆದದ್ದು 1930ರಲ್ಲಿ. ಈ ನಾಟಕದಲ್ಲಿ ಆತ ಏನನ್ನು ಹೇಳಲು ಉದ್ದೇಶಿಸಿದ್ದಾನೆ ಎಂಬುದು ಅವನ ಮಾತಿನಲ್ಲೇ ಹೇಳುವುದಾದರೆ, "ಯುದ್ದದ ಸಂದರ್ಭದಲ್ಲಿ ಸಾಮಾನ್ಯ ಜನ ಭಾರೀ ಲಾಭ ಗಳಿಸಲಾಗುವುದಿಲ್ಲ. ಯುದ್ಧ ವ್ಯಾಪಾರದ ಮುಂದುವರಿಕೆಯಾಗಿರುತ್ತದೆ. ಅದರ ಮಾರ್ಗಗಳು ಬೇರೆ ಅಷ್ಟೆ. ಅದು ಮನುಷ್ಯನ ಮೌಲ್ಯಗಳನ್ನು ಹತಗೊಳಿಸುವುದಷ್ಟೇ ಅಲ್ಲ, ಅದನ್ನು ಪ್ರಾರಂಭಿಸಿದವರನ್ನೂ ಶೋಚನೀಯ ಸ್ಥಿತಿಗೆ ತಳ್ಳುತ್ತದೆ. ಯುದ್ದವನ್ನು ತಡೆಗಟ್ಟಲು ಮಾಡುವ ಪ್ರಯತ್ನ ಬೇರೆಲ್ಲಾ ತ್ಯಾಗಕ್ಕಿಂತ ಅತಿ ದೊಡ್ಡದು."
'ಮದರ್ ಕರೇಜ್' ನಾಟಕವನ್ನು ಬರೆದದ್ದು 1930 ರಲ್ಲಿ. ಆಗ ಅವನು ದೇಶಾಂತರ ವಾಸದಲ್ಲಿದ್ದ. ಅವನು ಸ್ಕ್ಯಂಡಿನೇವಿಯಾ ದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾಗಲೇ ಈ ನಾಟಕದ ವಸ್ತುವಿನ ಹೊಳಹು ಆತನಿಗೆ ಗೋಚರಿಸತೊಡಗಿತು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗುವ ಮೊದಲೇ ಅವನು ಡೆನ್ಮಾರ್ಕಿನ ಜನರಿಗೆ ಎಚ್ಛರಿಕ ಕೊಡುವ ಪ್ರಯತ್ನ ಮಾಡಿದ. ನಾಜಿ ಜರ್ಮನಿಯಂಥ ಯುದ್ಧ ನಿರತ ರಾಷ್ಟ್ರವೊಂದು ಪಕ್ಕದಲ್ಲಿರುವಾಗ ಡೆನ್ಮಾರ್ಕ್ ಲಾಭದ ದೃಷ್ಠಿಯಿಂದ ಸುಮ್ಮನೆ ಸಾರಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಅವನಿಗನ್ನೀಸಿತು.
'ಮದರ್ ಕರೇಜ್' ನಾಟಕವನ್ನು ಅರ್ಥಮಾಡಿಕೊಳ್ಲಲು ಐತಿಹಾಸಿಕ ಹಿನ್ನೆಲೆ ಅನಿವಾರ್ಯವಾಗುತ್ತದೆ. ಶೇಕ್ಸ್ ಪಿಯರ್ ನಾಟಕಗಳನ್ನು ಅರ್ಥ ಮಾಡಿಕೊಳ್ಳಲು ಎಲಿಜಬೆಥನ್ ಯುಗದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಎಷ್ಟು ಅವಶ್ಯಕವೋ, ಮದರ್ ಕರೇಜ್ ನಾಟಕವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂವತ್ತು ವರ್ಷಗಳ ಯುದ್ಧದ ದೀರ್ಘ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಅವಶ್ಯಕ. ವಸ್ತುವಿನ ದೃಷ್ಠಿಕೋನದಿಂದ ಬ್ರೆಕ್ಟ್, ಶೇಕ್ಸ್ಪಿಯರ್ ನಿಗಿಂತ. ಭಿನ್ನವಾಗುತ್ತಾನೆ.

No comments:

Post a Comment