Thursday, November 18, 2010

Rathabeedi Geleyaru (Kannada)

ರಥಬೀದಿ ಗೆಳೆಯರು (ರಿ.) ಉಡುಪಿ
(
ಸಾಂಸ್ಕೃತಿಕ ವೇದಿಕೆ)
ಪ್ರೊ. ಕೆ. ಎಸ್. ಕೆದ್ಲಾಯ
ವಿಶಿಷ್ಟ ಪಟ್ಟಣ - ಉಡುಪಿ
ತೀವ್ರ ನಗರೀಕರಣ - ಪಾಶ್ಚಾತ್ಯೀಕರಣಕ್ಕೊಳಗಾಗಲು ಹವಣಿಸುತ್ತಾ ಸ್ವತ್ವವನ್ನು ಕಳೆದುಕೊಂಡು ಸಾಂಸ್ಕೃತಿಕವಾಗಿ ಬರಡಾಗುವುದು ಎಲ್ಲ ಪಟ್ಟಣಗಳ ಸದ್ಯದ ಸ್ಥಿತಿ. ಆದರೆ ಕಾಶಿಯನ್ನು ಬಿಟ್ಟರೆ ಉಡುಪಿ ಮಾತ್ರ ಆಧುನಿಕತೆಯ ಕೇಂದ್ರಸ್ಥಾನದಲ್ಲಿ ಪರಂಪರೆಯ ತಿರುಳನ್ನು ಉಳಿಸಿಕೊಂಡಿರುವುದನ್ನು ನಾವು ಕಾಣಬಹುದು. ಇದಕ್ಕೆ ಪ್ರಧಾನ ಕಾರಣ ಉಡುಪಿ ದಾಸಪಂಥಕ್ಕೆ ತಾತ್ತ್ವಿಕ ನೆಲೆಯನ್ನು ಒದಗಿಸಿದ ದ್ವೈತಮತದ ಕೇಂದ್ರವಾಗಿದ್ದುಕೊಂಡು ವೇದಾಧ್ಯಯನ, ಅಧ್ಯಾತ್ಮ ಚಿಂತನ-ಮಂಥನ, ಅಧ್ಯಯನ-ಅಧ್ಯಾಪನ-ಪ್ರವಚನಗಳ ನಿತ್ಯೋತ್ಸವದ ಕೇಂದ್ರವಾಗಿ ಜನರ ಭಾವಕೋಶದ ಒಂದು ಅಂಶವನ್ನು ತುಂಬಿರುವುದು; ನೆಲದ ವಿಶಿಷ್ಟ ಆಚರಣೆಯಾದ ಭೂತಾರಾಧನೆ, ನಾಗಮಂಡಲಗಳು, ಯಕ್ಷಗಾನ ಪಾಡ್ದನಗಳು ಜನರ ಸಾಂಸ್ಕೃತಿಕ ಬದುಕಿನಲ್ಲಿ ಇಂದಿಗೂ ಪ್ರಸ್ತುತವಾಗಿರುವುದು. ಪಶ್ಚಿಮ ಘಟ್ಟಗಳ ತಡೆ, ಚಿಕ್ಕ ಹಿಡುವಳಿ, ಅಧಿಕ ಮಳೆಯಿಂದಾಗಿ ರೂಪುಗೊಂಡ ಕೃಷಿಕ ಜೀವನ, ಮೀನುಗಾರಿಕೆ, ಬೃಹತ್ ಉದ್ಯಮಗಳ ಅಭಾವ, ಮೆಟ್ಟಿಗೊಂದರಂತೆ ದಟ್ಟವಾಗಿ ಹಬ್ಬಿದ ಕಾಲೇಜುಗಳು, ಇಲ್ಲಿಯ ವಿದ್ಯಾವಂತರಿಗೆ ತೀರಾ ಇತ್ತೀಚಿನವರಿಗೆ ಉದ್ಯೋಗ ದೊರಕಿಸಿಕೊಟ್ಟ ಇಲ್ಲೇ ಹುಟ್ಟಿದ ಬೃಹತ್ ಬ್ಯಾಂಕುಗಳು - ಇವೆಲ್ಲಾ ಜನರನ್ನು ಮಧ್ಯಮ ವರ್ಗದ ಜೀವನಕ್ರಮಕ್ಕೆ ಪ್ರೇರಣೆ ನೀಡಿವೆ. ಮಧ್ಯಮ ದಜರ್ೆಯ ಜನ ಎಲ್ಲಾ ಕಡೆ ಸಭ್ಯರೇ. ಆದರೆ ಇಲ್ಲಿಯ ಮಧ್ಯಮ ವರ್ಗ ಇನ್ನೂ ಸಭ್ಯರು; ಎಚ್ಚರದಿಂದ ಸಂಭಾವಿತತನವನ್ನು ಪ್ರದರ್ಶಿಸುವವರು. ಇವರು ಯಾವುದೇ ಅಂಗಡಿಯಲ್ಲೂ ಚೌಕಾಶಿ ಮಾಡುವುದಿಲ್ಲ. ಸಂತೆಯಲ್ಲೂ ಚರ್ಚೆ ಗದ್ದಲಗಳಿಲ್ಲ. ಬಾರ್‌ನಲ್ಲೂ ಮೆತ್ತಗೆ ಮಾತಾಡುವ ಜನರು ..-ಉಡುಪಿ ಜಿಲ್ಲೆಯ ಜನರು. ಇಲ್ಲಿಯ ಕೃಷಿ ಕಾರ್ಮಿಕರೂ ಆ ಕೆಲಸವನ್ನು ಬಿಟ್ಟು ಬಿಳಿಕಾಲರ್ ಉದ್ಯೋಗಕ್ಕೆ ಧುಮುಕಿ ಮಧ್ಯಮವರ್ಗದ ಜೀವನಾದರ್ಶವನ್ನು ರೂಢಿಸಿಕೊಂಡಿರುವುದನ್ನು ಕಾಣಬಹುದು. ಇಲ್ಲಿ ಕೂಲಿ ಕೆಲಸಕ್ಕೆ ಬಿಜಾಪುರದವರು ಬರಬೇಕಾದ ಪರಿಸ್ಥಿತಿ ಉಂಟಾದ್ದು ಇಲ್ಲಿಯ ತೀರಾ ಇತ್ತೀಚಿನ ಬೆಳವಣಿಗೆ.

ಉಡುಪಿಯ ರಥಬೀದಿ
ರಥಬೀದಿ ಎಂಬ ಶಬ್ದ ಕೇಳಿದೊಡನೆಯೇ ವರ್ಷಾವಧಿ ಹಬ್ಬದ ತೇರು ಬರುವ ಬೀದಿ, ಇಕ್ಕೆಲಗಳಲ್ಲಿ ಅಂಗಡಿಗಳು, ಮನೆಗಳು ಇತ್ಯಾದಿ - ನೆನಪಿಗೆ ಬರುತ್ತದೆ. ಉಡುಪಿಯ ರಥಬೀದಿ ಇಷ್ಟೇ ಅಲ್ಲ, ಅಂಗಡಿ ಸಾಲುಗಳ ನಡುನಡುವೆ ಹತ್ತಾರು ಮಠಗಳೂ ಇಲ್ಲಿವೆ. ಎಲ್ಲ ರಾಜಕೀಯ ಸಭೆಗಳೂ ಇಲ್ಲಿ ಜರುಗುತ್ತವೆ. ರಾಜೀವ ಗಾಂಧಿ, ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥ ರಾವ್ ಜೋಶಿ, ವೀರೇಂದ್ರ ಪಾಟೀಲ್, .ಎಂ.ಎಂ. ನಂಬೂದರಿಪಾಡ್ ಮೊದಲಾದವರ ಭಾಷಣವನ್ನು ಇಲ್ಲಿ ಜನ ಕೇಳಿದ್ದಾರೆ. ಕೃಷ್ಣಮಠದ ಹುಳುಕನ್ನು ಹೊರಗೆಡಹಿ ಯು.ಎಸ್. ಪಣಿಯಾಡಿಯವರು ಇಲ್ಲೇ ಭಾಷಣ ಮಾಡಿದ್ದು. ಕೋಮುವಾದಿ ವಿರೋಧಿ ಸಭೆಗಳೂ ಇಲ್ಲಿ ಜರುಗಿವೆ. ಲಂಕೇಶ್, ಕೆ.ವಿ. ಸುಬ್ಬಣ್ಣ ಇಲ್ಲಿ ಭಾಷಣ ಮಾಡಿದ್ದಿದೆ. ಸಾಹಿತ್ಯ ಸಭೆ, ನಾಟಕ, ಯಕ್ಷಗಾನಗಳೂ ಇಲ್ಲಿ ನಡೆಯುತ್ತದೆ. ಪರಿಸರದ ಸಾಹಿತಿಗಳು, ಅಧ್ಯಾಪಕರು, ನಿತ್ಯ ಸಂಜೆ ಇಲ್ಲಿಗೆ ಬಂದು ಬೀದಿ ಬದಿಯಲ್ಲಿ ನಿಂತೋ, ಅಂಗಡಿ ಮುಂಗಟ್ಟಿನಲ್ಲಿ ಕುಳಿತೋ, ಹರಟೆಹೊಡೆಯುತ್ತಾರೆ, ಸಾಂಸ್ಕೃತಿಕ, ರಾಜಕೀಯ ಆಗು-ಹೋಗುಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಾರೆ. ಉಡುಪಿಯ ಹೈಡ್ ಪಾರ್ಕ್ ರಥಬೀದಿ.

ರಥಬೀದಿ ಗೆಳೆಯರು
ಹೀಗೆ, ಇಲ್ಲಿ ನಿಂತು ಕೂತು ಚರ್ಚಿಸುವ, ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಯುವಕರು ಸಂಸ್ಥೆಯನ್ನು ಕಟ್ಟಿದರು. ಗೋಪಾಲಕೃಷ್ಣ ಅಡಿಗ, ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮೊದಲಾದ ನವ್ಯ ಸಾಹಿತಿಗಳ, ದೇವನೂರು ಮೊದಲಾದ ದಲಿತ ಕವಿಗಳ, ಸಮುದಾಯ ಸಾಂಸ್ಕೃತಿಕ ಜಾಥಗಳ, ನೀನಾಸಂ, ಬಿ.ವಿ. ಕಾರಂತರ ರಂಗಪ್ರಯೋಗಗಳ ಪ್ರಭಾವವಿರುವ ಯುವಕರು ಸಮಕಾಲೀನ ನಾಟಕರಂಗದ ಹೊಸ ಸಾಧ್ಯತೆಗಳನ್ನು ಜನರಿಗೆ ಪರಿಚಯಿಸಿ ಅವರ ರುಚಿ ಶುದ್ಧಿ ಮಾಡುವ ಘೋಷಣೆಯೊಂದಿಗೆ ನಾಟಕ ಸಂಸ್ಥೆ ಕಟ್ಟಿದರು.

ರಥಬೀದಿ ಗೆಳೆಯರು - ನಾಟಕ ವೇದಿಕೆಯಾಗಿ
1981
ರಲ್ಲಿ ಮಂದರ್ತಿ ಎಂಬ ನಾಟಕ ಪ್ರದರ್ಶನದ ಮೂಲಕ ರಂಗ ಪ್ರವೇಶಿಸಿದ ಸಂಸ್ಥೆ ನಾಟಕ ನಿರ್ದೇಶನಗಳಿಗೆ ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಅಥವಾ ನೀನಾಸಂನಲ್ಲಿ ಪರಿಣಿತರಾದ ನಿರ್ದೇಶಕರನ್ನು ಕರೆಸುವ ಪರಿಪಾಠವನ್ನು ಇಟ್ಟುಕೊಂಡಿತು. ಇದರಿಂದಾಗಿ ನಾಟಕದ ಆಯ್ಕೆಯಲ್ಲಿ ಪ್ರಸ್ತುತತೆ ಮತ್ತು ಹೊಸತನ, ಪ್ರದರ್ಶನದಲ್ಲಿ ಗಾಂಭೀರ್ಯ, ಬಿಗಿತನ, ಶಿಸ್ತುಗಳು ಒಡಮೂಡಿದವು.ರಥಬೀದಿ ಗೆಳೆಯರು ಸಿದ್ಧಗೊಳಿಸಿ ಪ್ರದರ್ಶಿಸಿದ ನಾಟಕಗಳು

ನಾಟಕ//ಕೃತಿಕಾರ//ನಿರ್ದೇಶನ
ಮಂದರ್ತಿ (1983)/ಜಿ. ಬಾಲಕೃಷ್ಣಯ್ಯ/.ರಾ.ಚಂದ್ರಶೇಖರ
ತಾಮ್ರಪತ (1983)/ದೇವಾಶಿಷ ಮುಜುಂದಾರ್/ಕೆ.ಜಿ.ನಾರಾಯಣರಾವ್
ಮ್ಯಾಕ್ಬೆತ್ (1983)/ ಶೇಕ್ಸ್‌ಪಿಯರ್/ ಬಿ.ಆರ್. ನಾಗೇಶ್
ಸೂಳೆ ಸನ್ಯಾಸಿ (1984)/ಕೆ.ವಿ. ಸುಬ್ಬಣ್ಣ/ಕೆ.ಜಿ. ನಾರಾಯಣ ರಾವ್
ಕತ್ತೆ ಮತ್ತು ಧರ್ಮ (1984)/ಸಿದ್ಧಲಿಂಗಯ್ಯ/ಟಿ.ಎಂ. ನಾಗರಾಜ್
ಬೇಕಾಬಿಟ್ಟಿ ಸಂಗೀತ ನಾಟಕ (1984)/ ಬಟ್ರೋಲ್ಟ್ ಬ್ರೆಕ್ಟ್ / ಕೆ.ವಿ. ಅಕ್ಷರ
ನೀಲಿ ಕುದುರೆ (ಮಕ್ಕಳ ನಾಟಕ) (1984/ ಕೆ.ಜಿ. ಕೃಷ್ಣಮೂರ್ತಿ
ಸದ್ದು ವಿಚಾರಣೆ ನಡೆಯುತಿದೆ (1986)/ವಿಜಯ್ ತೆಂಡೂಲ್ಕರ್/ಕೆ.ಜಿ. ನಾರಾಯಣ್
ಮೀಡಿಯಾ (1987)/ಸೋಫೋಕ್ಲಿಸ್/ಕೆ.ಜಿ. ನಾರಾಯಣ್/ವಿಸಿಟ್ (1988)/ಡರ್ಹೆನ್ಮೆಟ್/ಕೆ.ಜಿ. ಕೃಷ್ಣಮೂರ್ತಿ
ಹ್ಯಾಮ್ಲೆಟ್/ ಶೇಕ್ಸ್‌ಪಿಯರ್/ ಇಕ್ಬಾಲ್ ಅಹ್ಮದ್
ಪುಷ್ಪರಾಣಿ / ಚಂದ್ರಶೇಖರ ಕಂಬಾರ /ಪುಷ್ಪಾ ಹಾಲ್ಕೆರೆ
ಸಿರಿ ಸಂಪಿಗೆ /ಚಂದ್ರಶೇಖರ ಕಂಬಾರ / ಕೆ.ಜಿ. ನಾರಾಯಣ ರಾವ್
ಯಯಾತಿ /ಗಿರೀಶ್ ಕಾರ್ನಾಡ್ / ಕೆ.ಜಿ. ನಾರಾಯಣ ರಾವ್
ಅಗ್ನಿ ಮತ್ತು ಮಳೆ/ ಗಿರೀಶ್ ಕಾರ್ನಾಡ್ / ಕೃಷ್ಣಮೂರ್ತಿ ಕವತ್ತಾರ್

ನಾಟಕಗಳಲ್ಲಿ ಹೆಚ್ಚಿನವು ಜಿಲ್ಲೆಯ ಹೊರಗೂ ಒಳಗೂ ಅನೇಕ ಸ್ಥಳಗಳಲ್ಲಿ ಮರು ಪ್ರದರ್ಶನಗೊಂಡು ಸಂಸ್ಥೆಯ ಜನಪ್ರಿಯತೆಯನ್ನು ಹೆಚ್ಚಿಸಿವೆ. ಯಯಾತಿ ನಾಟಕ ದೂರದರ್ಶನದಲ್ಲಿ 6-7 ಬಾರಿ ಪ್ರದರ್ಶನಗೊಂಡು ದಾಖಲೆ
ನಿರ್ಮಿಸಿದೆ. ನಾಟಕ ಪ್ರದರ್ಶನ ಮಾತ್ರವಲ್ಲದೆ ಇತರ ಸಂಸ್ಥೆಗಳ ನಾಟಕ ಪ್ರದರ್ಶನಗಳನ್ನೂ ಸಂಸ್ಥೆ ಜರಗಿಸಿದೆ. ನೀನಾಸಂ ತಿರುಗಾಟದ ಮೂರೂ ನಾಟಕಗಳು ಪ್ರತಿ ವರ್ಷ ನಮ್ಮ ಸಂಸ್ಥೆಯ ಆಶ್ರಯದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಚಿಣ್ಣಬಣ್ಣ, ಕಿನ್ನರಿ ಮೇಳಗಳ ಅನೇಕ ನಾಟಕಗಳು ನಮ್ಮಲ್ಲಿ ಪ್ರದರ್ಶನಗೊಂಡಿವೆ. ಇಂದು ಸಂಸ್ಥೆಯಲ್ಲಿ 350ಕ್ಕೂ ಮಿಕ್ಕ್ಕಿ ಆಜೀವ ಸದಸ್ಯರೂ 900ಕ್ಕೂ ಮಿಕ್ಕಿ ಪ್ರೇಕ್ಷಕ ಸದಸ್ಯರೂ ಇದ್ದಾರೆ.ನಾಟಕ ರಂಗದಿಂದ ಸಾಂಸ್ಕೃತಿಕ ವೇದಿಕೆಯಾಗಿ
ನಾಟಕ ಪ್ರದರ್ಶನದ ಜೊತೆ ಜೊತೆಗೇ ನಾಟಕಕ್ಕೆ ಸಂಬಂಧಿಸಿದ ವಿಚಾರಗೋಷ್ಠಿಗಳು, ಉಪನ್ಯಾಸ ಕಾರ್ಯಕ್ರಮಗಳು, ಪ್ರದರ್ಶನ ವಿಮರ್ಶಾಗೋಷ್ಠಿಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಸಂಸ್ಥೆಯ ಸದಸ್ಯರ ಅಭಿರುಚಿಯಂದಾಗಿ ಸಾಹಿತ್ಯ ಕಾರ್ಯಕ್ರಮಗಳೂ ಕ್ರಮೇಣ ಆರಂಭವಾಯ್ತು. ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ, ಆಘಾತಗಳ ಬಗ್ಗೆ, ಮಾನವಿಕ ಶಾಸ್ತ್ರಗಳ ಆಧುನಿಕ ಚಿಂತನೆಗಳ ಬಗ್ಗೆ ಗಂಭೀರವಾದ ಚರ್ಚೆಗಳಿಗೆಸಂಸ್ಥೆ ಅನುವುಮಾಡಿಕೊಡುತ್ತಾ ನಾಟಕದ ಜೊತೆ ಜೊತೆಗೇ ಸಾಂಸ್ಕೃತಿಕ ಕಾರ್ಯಕ್ರವಮವನ್ನು ಹಮ್ಮಿಕೊಳ್ಳುತ್ತಾ ಸಾಂಸ್ಕೃತಿಕ ವೇದಿಕೆಯಾಗಿ ಸಂಸ್ಥೆ ಬೆಳೆಯಿತು.

ಸಂಸ್ಥೆಯ ಆಶ್ರಯದಲ್ಲಿ ಜರಗಿದ ಕೆಲವು ಕಾರ್ಯಕ್ರಮಗಳು
ಸಾಹಿತ್ಯ: ಸಾಹಿತ್ಯ ಕೃತಿ ಬಿಡುಗಡೆ, ಸಾಹಿತಿಗಳ ಬಗ್ಗೆ ವಿಚಾರಗೋಷ್ಠಿ, ಸಂಸ್ಥೆಯ ಆಶ್ರಯದಲ್ಲಿ ಜರಗುತ್ತಿರುತ್ತದೆ. ಅನೇಕ ಸಾಹಿತಿಗಳು, ವಿಮರ್ಶಕರು ಸಂಸ್ಥೆಯ ಆಶ್ರಯದಲ್ಲಿ, ಉಪನ್ಯಾಸ ನೀಡಿದ್ದಾರೆ.ಕೆ.ವಿ. ಸುಬ್ಬಣ್ಣ, ಭೀಷ್ಮ ಸಾಹ್ನಿ, ಪ್ರಿಟ್ಸ್ಬೆನಿವಿಟ್ಸ್, ತೇಜಸ್ವಿನಿ ನಿರಂಜನ, ಸು.ರಂ. ಎಕ್ಕುಂಡಿ, ಯು. ಆರ್. ಅನಂತಮೂರ್ತಿ, ವ್ಯಾಸರಾಯ ಬಲ್ಲಾಳ, ಪಾ.ವೆಂ. ಆಚಾರ್ಯ, ಡಿ. ಆರ್. ನಾಗರಾಜ, ಡಾ. ಶಿವರಾಮ ಕಾರಂತ, ಕೃಷ್ಣಾನಂದ ಹೆಗ್ಡೆ, ಕು.ಶಿ. ಹರಿದಾಸ ಭಟ್, ಬನ್ನಂಜೆ ಗೋವಿಂದಾಚಾರ್ಯ, ಮಾಲತಿ ಪಟ್ಟಣಶೆಟ್ಟಿ, ಕೀರ್ತಿನಾಥ ಕುರ್ತಕೋಟಿ, ಬಿ. ಭಾಸ್ಕರ ರಾವ್, ಮುರಳೀಧರ ಉಪಾಧ್ಯ ಮೊದಲಾದ ಮಹನೀಯರು ನಮ್ಮಲ್ಲಿ ಉಪನ್ಯಾಸ ನೀಡಿದ್ದಾರೆ.ಬ್ರೆಕ್ಟ್ ವಿಚಾರಗೋಷ್ಠಿ: (1984) ಡಾ. ಚಂದ್ರಶೇಖರ ಕಂಬಾರ, ಪ್ರಸನ್ನ, ರುಸ್ತುಂ, ಭರೂಚ, ಜಿ. ರಾಜಶೇಖರ್, ಕೆ.ವಿ. ಅಕ್ಷರ, ಡಾ. ಶಶಿಧರ್ ಮೊದಲಾದವರು ಭಾಗವಹಿಸಿದ್ದಾರೆ.ಅಕ್ಷರ ಚಿಂತನ ಮಾಲಿಕೆಯ ಗ್ರಂಥ ಬಿಡುಗಡೆ: ಬಿ.ವಿ. ಕಾರಂತ ವಿಚಾರ ಸಂಕಿರಣ: ನೀನಾಸಂನ ಅಕ್ಷರ ಚಿಂತನ ಮಾಲಿಕೆಯ ಮೊದಲ 10 ಗ್ರಂಥಗಳ ಬಿಡುಗಡೆ ಸಮಾರಂಭ ನಮ್ಮ ಸಂಸ್ಥೆಯ ಆಶ್ರಯದಲ್ಲಿ ಜರಗಿತು. ಇದೇ ಸಂದರ್ಭದಲ್ಲಿ ಖ್ಯಾತ ರಂಗ  ಬಿ.ವಿ. ಕಾರಂತರನ್ನು ಸಂಮಾನಿಸಲಾಯಿತು. ಡಿ. ಆರ್. ನಾಗರಾಜ್, ಜಿ. ರಾಜಶೇಖರ, ಬಿ. ಆರ್. ನಾಗೇಶ್, ಸತೀಶ್ ಬಹದ್ದೂರ್, ಕೀರ್ತಿನಾಥ  ಕುರ್ತಕೋಟಿ, ಪ್ರಸನ್ನ, ಅಗ್ರಹಾರ ಕೃಷ್ಣಮೂರ್ತಿ, ಕು.ಶಿ. ಹರಿದಾಸ ಭಟ್ಟ, ವೈದೇಹಿ, ಎನ್. ಗುರುರಾಜ್, ಪಟ್ಟಾಭಿರಾಮ ಸೋಮಯಾಜಿ, ಲಕ್ಷ್ಮೀಶ ತೋಳ್ಪಾಡಿ, ಶೂದ್ರ ಶ್ರೀನಿವಾಸ್ ಮೊದಲಾದವರು ಗೋಷ್ಠಿಯಲ್ಲಿ ಭಾಗವಹಿಸಿದರು.

ಡಾ. ಯು. ಆರ್. ಅನಂತಮೂರ್ತಿ: ವ್ಯಕ್ತಿ - ಕೃತಿ - ಸಂಮಾನ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರಿಗೆ ಎಕಾಡೆಮಿ ಆಫ್ ಜನರಲ್ ಎಜ್ಯಕೇಶನ್ ಸಹಯೋಗದಲ್ಲಿ ಸಂಮಾನಿಸಲಾಯಿತು. ಅಶಿಸ್ ನಂದಿ, ರಾಮಕಷ್ಣ ಹೆಗಡೆ, ಡಿ. ಆರ್. ನಾಗರಾಜ್, ಕೆ.ವಿ. ಸುಬ್ಬಣ್ಣ, ಕು.ಶಿ. ಹರಿದಾಸ ಭಟ್ಟ ಮೊದಲಾದವರು ಅನಂತಮೂರ್ತಿಯವರನ್ನು ಸಂಮಾನಿಸುವಲ್ಲಿ ಮುಂದಾದರು. ಇದಕ್ಕೆ ಪೂರ್ವಭಾವಿಯಾಗಿ ಜರಗಿದ ಅನಂತಮೂರ್ತಿಯವರ ವ್ಯಕ್ತಿತ್ವ ಮತ್ತು ಕೃತಿ ವಿಶ್ಲೇಷಣೆಯ ಕಾರ್ಯಕ್ತಮದಲ್ಲಿ ಮನು ಚಕ್ರವರ್ತಿ, ನಟರಾಜ್ ಹುಳಿಯಾರ್, ಬಿ. ದಾಮೋದರ ರಾವ್, ಕಿ.ರಂ. ನಾಗರಾಜ, ಪ್ರಸನ್ನ, ಟಿ.ಪಿ. ಅಶೋಕ, ಪಟ್ಟಾಭಿರಾಮ ಸೋಮಯಾಜಿ, ಹಯವದನ ಉಪಾಧ್ಯ ಮೊದಲಾದವರು ಭಾಗವಹಿಸಿದರು

.. ರಾ. ಬೇಂದ್ರೆ ವಿಚಾರಗೋಷ್ಠಿ
ಕನ್ನಡದ ವರಕವಿ .ರಾ. ಬೇಂದ್ರೆಯವರ ಬಗ್ಗೆ ನಡೆದ ಒಂದು ದಿನದ ವಿಚಾರಗೋಷ್ಠಿಯಲ್ಲಿ ಕೆ.ವಿ. ಸುಬ್ಬಣ್ಣ, ಲಕ್ಷ್ಮೀಶ ತೋಳ್ಪಾಡಿ, ಎನ್. ಶ್ರೀಶ ಬಲ್ಲಾಳ್, ಯು. ಆರ್. ಅನಂತಮೂರ್ತಿ ಮೊದಲಾದವರು ಭಾಗವಹಿಸಿದರು.

ಗಿರೀಶ್ ಕಾರ್ನಾಡ್ ಸಾಹಿತ್ಯ - ಸಂಮಾನ - ಉಪನ್ಯಾಸ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಗಿರೀಶ್ ಕಾರ್ನಾಡರ ಸಾಹಿತ್ಯ ಕೃತಿಗಳ ಬಗ್ಗೆ ಜರಗಿದ ವಿಚಾರ ಸಂಕಿರಣದಲ್ಲಿ ಪ್ರಸನ್ನ, ಸಿ. ಎನ್. ರಾಮಚಂದ್ರನ್, ರಾಜೇಂದ್ರ ಚೆನ್ನಿ, ಅರುಂಧತಿ ನಾಗ್, ಕೆ.ವಿ. ಅಕ್ಷರ, ಫಣಿರಾಜ್, .ಕೆ. ಬೊಳುವಾರು, ಮೊದಲಾದವರು ಭಾಗವಹಿಸಿದ್ದರು. ಸದ್ಯದ ಭಾರತದ ಸಾಂಸ್ಕೃತಿಕ ಸ್ಥಿತಿಯ ಬಗ್ಗೆ ಗಿರೀಶ್ ಗಿರೀಶ್ ಕಾರ್ನಾಡ್‍ರು ಉಪನ್ಯಾಸ ನೀಡಿದರು. ಬಳಿಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರನ್ನು ಸಂಮಾನಿಸಲಾಯಿತು
.
ಕೃತಿ ಪ್ರಕಟಣೆ, ಕೃತಿ ಬಿಡುಗಡೆ
ನಿ. ಮುರಾರಿ ಬಲ್ಲಾಳರು ಬರೆದ 'ಉಡುಪಿಯ ಸಾಂಸ್ಕೃತಿಕ ಕಥನ' ಗ್ರಂಥ ಪ್ರಕಾಶನದ ಮೂಲಕ ಸಂಸ್ಥೆ ಗ್ರಂಥ ಪ್ರಕಾಶನಕ್ಕೆ ಕೈಯಿಕ್ಕಿತು. ಉಡುಪಿಯ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಬದಲಾವಣೆಯ ಗತಿಯ ಬಗ್ಗೆ ಅಮೂಲ್ಯ ಒಳನೋಟಗಳಿರುವ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಯು. ಆರ್. ಅನಂತಮೂರ್ತಿ, ಎಂ. ಪ್ರಭಾಕರ ಜೋಶಿ, ಕು. ಶಿ. ಹರಿದಾಸ ಭಟ್ ಅವರು ಭಾಗವಹಿಸಿದ್ದರು. ಬಲ್ಲಾಳರ ಇನ್ನೊಂದು ಕೃತಿ 'ಒಂಟಿದನಿ' ಬಿಡುಗಡೆಯೂ ನಮ್ಮ ಸಂಸ್ಥೆಯ ಆಶ್ರಯದಲ್ಲಿ ಜರಗಿತು. ಮಹಾಬಲೇಶ್ವರ ರಾವ್, ದಾಮೋದರ ರಾವ್, ವೈದೇಹಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಬಲ್ಲಾಳರ ಇತ್ತೀಚಿನ ಪ್ರಕಟಣೆ 'ಸಾಹಿತ್ಯ ಸಮ್ಮುಖ' ಬಿಡುಗಡೆಯು ಎಪ್ರಿಲ್ 1ರಂದು ಜರಗಲಿದೆ. ವರದೇಶ್ ಹಿರೇಗಂಗೆಯವರು ಪುಸ್ತಕ ಪರಿಚಯ ಮಾಡುತ್ತಾರೆ. ಟಿ.ಪಿ. ಅಶೋಕ್ ಅವರು 'ಕನ್ನಡದ ಆಧುನಿಕ ವಿಮಶರ್ಾ ನೆಲೆಗಳು' ಎಂಬ ಉಪನ್ಯಾಸ ನೀಡಲಿದ್ದಾರೆ.

ರಾಷ್ಟ್ರ-ರಾಜ್ಯ ಮಟ್ಟದ ವಿಚಾರ ಸಂಕಿರಣಗಳು

ನಾಟಕದಲ್ಲಿ ಸಮಕಾಲೀನತೆ


ನೆಹರೂ ಬದುಕು, ಚಿಂತನೆ: ರಾಷ್ಟ್ರೀಯ ವಿಚಾರ ಸಂಕಿರಣ
ನೆಹರೂ ಜನ್ಮ ಶತಾಬ್ದಿಯ ಅಂಗವಾಗಿ ಜರಗಿದ ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ದೇಶದ ಪ್ರಖ್ಯಾತ ಸಮಾಜಶಾಸ್ತ್ರಜ್ಞರು, ಚಿಂತಕರು, ಅರ್ಥಶಾಸ್ತ್ರಜ್ಞರು ಭಾಗವಹಿಸಿದರು. ನೆಹರೂ ಚಿಂತನೆಯ ಹಿರಿಮೆ - ಇತಿಮಿತಿಗಳ ಬಗ್ಗೆ, ನಿಖರ ವಿಮರ್ಷೆ ಸಂಕಿರಣದಲ್ಲಿ ಜರಗಿತು. ಕೇಂದ್ರಮಂತ್ರಿಗಳಾಗಿದ್ದ ಶಿವಶಂಕರ್, ಸುಖರಾಮ್, ಜನಾರ್ದನ ಪೂಜಾರಿಯವರು ಗೋಷ್ಠಿಯ ಉದ್ಘಾಟನೆ, ಸಮಾರೋಪದಲ್ಲಿ ಭಾಗವಹಿಸಿದರು. ಚಿಂತಕರಾದ ರವೀಂದ್ರ ಕುಮಾರ್, ಯು. ಆರ್. ಅನಂತಮೂರ್ತಿ, ಎಂ.ಜೆ. ಅಕ್ಬರ್, ಕೆ.ಜಿ. ಷಾ, ಡಿ.ಪಿ. ತ್ರಿಪಾಠಿ, ಜಿ.ಡಿ. ಶರ್ಮ, ಪಿ. ಆರ್. ಬ್ರಹ್ಮಾನಂದ, ಸುದೀಪ್ತ ಕವಿರಾಜ್, ಎನ್. ಎಸ್. ಐಯಂಗಾರ್, ಶಫಿಯುಲ್ಲಾ, ಬಿ. ಆರ್. ನಂದ, ವೆಲೇರಿಯನ್ ರಾಡ್ರಿಗಸ್, ಡಿ. ಆರ್. ನಾಗರಾಜ್, ಆಸ್ಕರ ಫೆರ್ನಾಂಡಿಸ್, ಸರ್ವಮಂಗಳ ಮೊದಲಾದವರೂ, ಅನೇಕ ಎಂ.ಎಲ್.., ಎಂ.ಪಿಗಳೂ ಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.ಕಲೆ, ಸಂಸ್ಕೃತಿ, ಮೌಲ್ಯಗಳು - ಇಚಿದು: ರಾಷ್ಠ್ರೀಯ ಸಾಂಸ್ಕೃತಿಕ ಸಂವಾದ:ಕೇಂದ್ರ ಸರಕಾರದಿಂದ ನಿಯುಕ್ತಗೊಂಡ ಹಕ್ಸರ್ ಕಮಿಟಿ ಸಲ್ಲಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಧೋರಣೆಯ ಹಿನ್ನೆಲೆಯಲ್ಲಿ ಭಿನ್ನ ಮಾನವಿಕ ಶಿಸ್ತುಗಳಾದ ಸಂವಾದ ಜರಗಿತು. ಮೂರು ದಿನಗಳ ಸಂಕಿರಣವನ್ನು ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರ ಸಾಂಸ್ಕೃತಿಕ ಸಲಹೆಗಾರರಾಗಿದ್ದ ಶ್ರೀಮತಿ ಪುಪುಲ್ ಜಯಕರ್ ಅವರು ಉದ್ಘಾಟಿಸಿದರು. ಸಾಹಿತ್ಯ, ನಾಟಕ, ಚಿತ್ರಕತೆ, ಚಲನಚಿತ್ರ, ಟಿ.ವಿ. ಮೊದಲಾದ ಮಾಧ್ಯಮಗಳ ಅನೇಕ ವಿದ್ವಾಂಸರು ಗೋಷ್ಠಿಯಲ್ಲಿ ಭಾಗವಹಿಸಿದರು. ಕೆ.ವಿ. ಸುಬ್ಬಣ್ಣ, ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಬಿ.ವಿ. ಕಾರಂತ, ಡಿ. ಆರ್. ನಾಗರಾಜ್, ಜಿ. ರಾಜಶೇಖರ, ಬಿ.. ವಿವೇಕ ರೈ, ಆರ್ಯ, ಕೀರ್ತಿನಾಥಾ ಕುರ್ತಕೋಟಿ, . ರತ್ನ, ಬನ್ನಂಜೆ ಗೋವಿಂದಾಚಾರ್ಯ, ಕೆ.ವಿ. ಅಕ್ಷರ, ಜಿ.ಬಿ. ಜೋಶಿ, ಟಿ.ಪಿ. ಅಶೋಕ್, ವೆಲೇರಿಯನ್ ರಾಡ್ರಿಗಸ್ ಮೊದಲಾದವರು ಪ್ರಮುಖ ಪಾತ್ರ ವಹಿಸಿದರು.ಸಂವಾದದ ಅಂತ್ಯದಲ್ಲಿ ಸಾಂಸ್ಕೃತಿಕ ಧೋರಣೆಯ ಬಗ್ಗೆ ನಿರ್ಣಯವನ್ನು ಸ್ವೀಕರಿಸಿ, ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು.ಗಾಂಧಿ ಮತ್ತು ಆಧುನಿಕ ಜಾಗತಿಕ ಸಂಸ್ಕೃತಿ - ಪ್ರಗತಿಯ ಮರುಚಿಂತನೆ:ಮಹಾತ್ಮ ಗಾಂಧೀಜಿಯ 125ನೇ ಜನ್ಮ ಶತಾಬ್ದಿಯ ಅಂಗವಾಗಿ ಮಣಪಾಲ್ ಎಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‍ನ ಸಹಯೋಗದಲ್ಲಿ 2 ದಿನಗಳ ವಿಚಾರ ಸಂಕಿರಣವನ್ನು ನಡೆಸಲಾಯಿತು. ಜಾಗತೀಕರಣದ ಜಗ್ಗಾಟದಲ್ಲಿ ನಮ್ಮ ದೇಶ ವರೆಗೆ ಕಾಯ್ದುಕೊಂಡ ಮೌಲ್ಯಗಳು, ದೇಶೀಯ ಜ್ಞಾನ ಸಂಪತ್ತು ಇವೆಲ್ಲ ಅಪ್ರಸ್ತುತ ಎಂದು ಭಾವಿಸಲಾಗುತ್ತಿರುವ ಸದ್ಯದ ಸ್ಥಿತಿಯಲ್ಲಿ ಗಾಂಧಿ ವಿಚಾರಧಾರೆಯ ಅಗತ್ಯವನ್ನು ಸಂಕಿರಣದಲ್ಲಿ ಅನ್ವೇಷಿಸಲಾಯಿತು. ಜೆ.ಪಿ.ಎನ್., ಒಬೆರಾಯ್, ಧರಂಪಾಲ್, ಅಶೀಶ್ ನಂದಿ, ರಾಮಚಂದ್ರ ಗುಹ, ಆರ್. ಸುದರ್ಶನ್, ನಂದನಾ ರೆಡ್ಡಿ, ಎನ್. ಭರತ್ ಬಲ್ಲಾಳ್, ಡಿ.ಆರ್. ನಾಗರಾಜ್, ಯು. ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ, ಪ್ರಸನ್ನ, ಕೆ. ಶಿವರಾಮ ಕಾರಂತ, ಗೋಪಾಲ್ ಗುರು, ಕ್ಲಾಡ್ ಅಲ್ವಾರಿಸ್, ರಾಜನ್ ಗುರುಕ್ಕಲ್, ಕೆ. ರಾಘವೇಂದ್ರ ರಾವ್, ದೇವನೂರು ಮಹಾದೇವ, ಬಿ. ದಾಮೋದರ ರಾವ್, ಎನ್. ಕೆ. ತಿಂಗಳಾಯ - ಮೊದಲಾದ ವಿದ್ವಾಂಸರು/ಸಾಮಾಜಿಕ ಕಾರ್ಯಕರ್ತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

ವಿಶಿಷ್ಟ ವಿಚಾರ ಸಂಕಿರಣಗಳು/ಕಾರ್ಯಕ್ರಮಗಳು

ವೈದಿಕ ಅವೈದಿಕ ದ್ವಂದ್ವ
ಭಾರತೀಯ ಸಂಸ್ಕೃತಿಯನ್ನು ರೂಪಿಸಿದ ವೈದಿಕ ಅವೈದಿಕ ದ್ವಂದ್ವದ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ನಡೆಸಲಾಯಿತು. ಆಧುನಿಕ ಚಿಂತನಶೀಲರು ಹಾಗೂ ಪರಂಪರೆಯ ಪ್ರತಿನಿಧಿಗಳ ಸಮರ್ಥ ಮುಖಾಮುಖಿ ಚಿಂತನಗೋಷ್ಠಿಯ ವೈಶಿಷ್ಟ್ಯ. ಆಧುನಿಕೋತ್ತರ ಚಿಂತಕರಲ್ಲೊಬ್ಬರಾದ ಡಿ. ಆರ್. ನಾಗರಾಜ್ ಅವರು ಅವೈದಿಕ ಪೂರ್ವಪಕ್ಷ ಮಂಡಿಸಿದರು. ಪ್ರಸಿದ್ಧ ವೈದಿಕ ಉಪನಿಷತ್ ವಿದ್ವಾಂಸ ಮತ್ತೂರು ಅಶ್ವತ್ಥನಾರಾಯಣ ಅವಧಾನಿಯವರು ವೈದಿಕ ಚಿಂತನೆಯ ನೆಲೆಯನ್ನು ಸಮರ್ಥವಾಗಿ ಪ್ರತಿಪಾದಿಸಿದರು. ರಂಗನಾಥ ಶರ್ಮ, ಪ್ರಭಾಕರ ಜೋಶಿ, ರಾಜಗೋಪಾಲಾಚಾರ್ಯ, ಪಿ. ಶ್ರೀಪತಿ ತಂತ್ರಿ ಮೊದಲಾದವರು ವೈದಿಕ ವಿಚಾರಧಾರೆಯ ಇತಿಹಾಸವನ್ನು ಮಂಡಿಸಿದರು. ಡಾ. ಯು. ಆರ್. ಅನಂತಮೂ ರ್ತಿಯವರು ಸಭಾಧ್ಯಕ್ಷತೆ ವಹಿಸಿದರು.ಸ್ವಾತಂತ್ರಯ ಸುವರ್ಣ ಮಹೋತ್ಸವ - 'ನಾವು' ಮತ್ತು 'ಇತರರು'ಉಪನ್ಯಾಸ ಮಾಲಿಕೆಯನ್ನು 1997ರಲ್ಲಿ ವರ್ಷದಾದಂತ್ಯ ಜರಗಿಸಲಾಯಿತು. ಮಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣ ಮಾಲಿಕೆಯನ್ನು ಉದ್ಘಾಟಿಸಿದರು. ಡಿ. ಆರ್. ನಾಗರಾಜ್, ಯು. ಆರ್. ಅನಂತಮೂರ್ತಿ, , ಕೀರ್ತಿನಾಥ ಕುರ್ತಕೋಟಿ, ಆಸ್ಕರ್ ಆಲಿ ಎಂಜಿನಿಯರ್, ಶಂಭು ಹೆಗಡೆ, ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಮೊದಲಾದ ವಿದ್ವಾಂಸರ ಉಪನ್ಯಾಸ ಮಾಲಿಕೆಯಲ್ಲಿ ಜರಗಿತು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಕಳೆದ ವರ್ಷ ಇದೇ ಮಾಲಿಕೆಯಲ್ಲಿ ಉಪನ್ಯಾಸವಿತ್ತರು.

ಭಾರತದ ಸಾಂಸ್ಕೃತಿಕ ಇತಿಹಾಸ
ಭಾರತದ ಸಾಂಸಕೃತಿಕ ಇತಿಹಾಸದ ಬಗ್ಗೆ ಜರಗಿದ ಉಪನ್ಯಾಸ ಮಾಲಿಕೆಯಲ್ಲಿ ಪಿ. ಶ್ರೀಪತಿ ತಂತ್ರಿ, ಬನ್ನಂಜೆ ಗೋವಿಂದಾಚಾರ್ಯ, ವಿಲ್ಲಿ ಡಿ. ಸಿಲ್ವ, ಪ್ರಭಾಕರ ಜೋಶಿ, ಮೊದಲಾದವರ ಉಪನ್ಯಾಸ ಏರ್ಪಡಿಸಲಾಯಿತು.ಡಿ. ಆರ್. ನಾಗರಾಜ ಚಿಂತನ-ನಮನ:ಆಧುನಿಕೋತ್ತರ ಚಿಂತಕ, ಕನ್ನಡದ ವಿಶಿಷ್ಟ ವಿಮರ್ಶಕ ಡಿ. ಆರ್. ನಾಗರಾಜ್ ಅವರು ಭಾರತೀಯ ಜ್ಞಾನಪರಂಪರೆಗೆ ನೀಡಿದ ಕೊಡುಗೆಯ ಬಗ್ಗೆ 1998ರಲ್ಲಿ ಒಂದು ದಿನದ ಗೋಷ್ಠಿ ಜರಗಿತು. ಗಿರೀಶ್ ಕಾರ್ನಾಡ್, ಮನು ಚಕ್ರವರ್ತಿ, ಕೆ.ವಿ. ಸುಬ್ಬಣ್ಣ, ಯು. ಆರ್. ಅನಂತಮೂರ್ತಿ, ಎನ್. ಮುರಾರಿ ಬಲ್ಲಾಳ್ ಅವರು ಉಪನ್ಯಾಸ ನೀಡಿದರು.

ಸಹಯೋಗ ಕಾರ್ಯಕ್ರಮಗಳು
ಲಂಡನ್ನ ಕಿವುಡ ಮೂಕರ ನಾಟಕ ತಂಡ ಸೈನ್ ಆರ್ಟ್ಸ್ ಗ್ರೂಪ್‍ನವರಿಂದ ಶ್ರೀಕೃಷ್ಣ ಮಠದಲ್ಲಿ ನಾಟಕವನ್ನು ಆಯೋಜಿಸಲಾಯಿತು.
ಮಾರನಾಯಕ (ಮ್ಯಾಕ್ಬೆತ್) ಪ್ರದರ್ಶನ
ಡಿ.ಜಿ.ಪಿ. ರೇವಣಸಿದ್ಧಯ್ಯ ಅವರ ನೇತೃತ್ವದಲ್ಲಿ ಕೈದಿಗಳು ಅಭಿನಯಿಸಿದ ಮ್ಯಾಕ್ಬೆತ್ ನಾಟಕ ಪ್ರದರ್ಶನವನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವ್ಯವಸ್ಥೆಗೊಳಿಸಲಾಯಿತು.

ಚಾಲಿ ನೃತ್ಯ ಪ್ರದರ್ಶನ
ಭಾರತೀಯ ವಿಭಿನ್ನ ನೃತ್ಯ ಪರಂಪರೆಗಳ ಅಂತ:ಸತ್ತ್ವವನ್ನು, ಯೋಗ, ಕಳರಿಪಟ್ಟು ಪಾಶ್ಚಾತ್ಯ ನೃತ್ಯ ತಂತ್ರಗಳೊಂದಿಗೆ ಮೇಳೈಸಿ, ನೃತ್ಯದ ಎಲ್ಲೆಯನ್ನು ವಿಸ್ತರಿಸಿ ಕರಾವಳಿ ರಾಜ್ಯಗಳಲ್ಲಿ ಪ್ರದರ್ಶನ ನೀಡುವ ಚಾಲಿ ನೃತ್ಯ ತಂಡದ ಪ್ರದರ್ಶನವನ್ನು ಶ್ರೀ ಕೃಷ್ಣ ಮಠದಲ್ಲಿ ಏರ್ಪಡಿಸಲಾಯಿತು.ಗ್ರಾಮಾಂತರ ಪ್ರದೇಶದಲ್ಲಿ ಉಚಿತ ಚಲನಚಿತ್ರ ಪ್ರದರ್ಶನ, ರಸಗ್ರಹಣ ಶಿಬಿರ:
1990
ರಲ್ಲಿ ಉಡುಪಿಯ ಪರಿಸರದ ಮೂರು ಗ್ರಾಮಾಂತರ ಪ್ರದೇಶಗಳಲ್ಲಿ ಜಗತ್ತಿನ 15ಕ್ಕೂ ಮಿಕ್ಕಿ ಚಲನಚಿತ್ರಗಳನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ಚಲನಚಿತ್ರ ರಸಗ್ರಹಣ ಶಿಬಿರವನ್ನು ಕೆ.ವಿ. ಅಕ್ಷರ, ನಾಗಭೂಷಣ ಮೊದಲಾದವರು ನಡೆಸಿಕೊಟ್ಟರು.ಗಿರೀಶ ಕಾಸರವಳ್ಳಿಯವರ ಮನೆ ಮತ್ತು ತಾಯಿಸಾಹೇಬಾ ಚಿತ್ರ ಪ್ರದರ್ಶನ ಮತ್ತು ಕಾಸರವಳ್ಳಿಯವರ ಉಪನ್ಯಾಸವನ್ನು 1999ರಲ್ಲಿ ಜರಗಿಸಲಾಯಿತು.ಭಾರತ್ ಅನ್ವೇಷಣಾ ಜಾಥಾ / ಸ್ಪಿಕ್ ಮೆಕೆ ಕಾರ್ಯಕ್ರಮ:ಯುವ ಜನಾಂಗದಲ್ಲಿ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಗೀತ ನೃತ್ಯ ಕಲೆಗಳ ಬಗ್ಗೆ ಅರಿವು ಮೂಡಿಸಲು ಪರಿಶ್ರಮಿಸುತ್ತಿರುವ ಸ್ಪಿಕೆ ಮೆಕೆ ತಂಡದವರ ಪ್ರದರ್ಶನ, ಉಪನ್ಯಾಸ ಶಿಬಿರ / ಭಾರತ್ ಅನ್ವೇಷಣಾ ಜಾಥದ ಕಾರ್ಯಕ್ರಮ 1998ರಲ್ಲಿ ಜರಗಿತು. ರಾಜೀವ್ ಭಾರ್ಗವ್, ಶ್ರೀಮತಿ ನೀರಜ್ ಗೋಪಾಲ್ ಅವರು ಸಂವಾದವನ್ನು ನಡಿಸಿಕೊಟ್ಟರು. ಅದೇ ದಿನ ಹಬೀಬ್ ತನ್ವೀರ್‌ರ ಮುದ್ರಾರಾಕ್ಷಸ ನಾಟಕ ಪ್ರದರ್ಶನಗೊಂಡಿತು.ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹಾಗೂ ಸಮೀಪದ ಜಿಲ್ಲೆಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಕ್ಕೆ ಆಗಮಿಸುವ ಚಿಂತಕರನ್ನು ನಮ್ಮ ವೇದಿಕೆಗೆ ಆಹ್ವಾನಿಸಿ ಉಪನ್ಯಾಸ ಏರ್ಪಡಿಸುತ್ತಾ ಬಂದಿದ್ದೇವೆ.ಸಂಸ್ಥೆಯ ಹೆಸರಿನಡಿಯಲ್ಲಿ ಜರಗಿ ವಿಭಿನ್ನ ಕಾರ್ಯಕ್ರಮಗಳ ಸ್ಥೂಲ ಪರಿಚಯವನ್ನು ಮೇಲೆ ನೀಡಲಾಗಿದೆ.ರಥಬೀದಿ ಗೆಳೆಯರ ಆಡಳಿತ ಮಂಡಳಿ ಹಾಗೂ ಸದಸ್ಯವರ್ಗವು ವಿಭಿನ್ನ ಜ್ಞಾನಕ್ಷೇತ್ರಗಳಲ್ಲಿ ಆಸಕ್ತಿಯಿಂದ ದುಡಿಯುವ ಪ್ರಾಧ್ಯಾಪಕರ, ಸಾಹಿತಿಗಳ, ಕಲಾವಿದರ, ವಿಮರ್ಶಕರ, ವಿವಿಧ ಮಾನವಿಕ ಶಾಸ್ತ್ರಗಳಲ್ಲಿ ಪರಿಣಿತರ ಒಂದು ಒಕ್ಕೂಟ. ರಥಬೀದಿ ಗೆಳೆಯರು ಸಂಸ್ಥೆಯಲ್ಲಿ ಕಾಣುವ ಶಿಸ್ತು, ಪಾರದರ್ಶಕತೆ, ಸರಳತೆಗಳು ಪರಿಸರದ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳಿಗೂ ವಿಸ್ತರಿಸಿದ್ದನ್ನು ನಾವು ಕಾಣಬಹುದು. ಕೋಮು ಸೌಹಾರ್ದತಾ ಸಭೆ, ಚಿತ್ರಕಲಾ ಸಮ್ಮೇಳನ, ಪರಿಸರಾಸಕ್ತರ ಚಳುವಳಿ, ಹೀಗೆ ಎಲ್ಲ ಕಾರ್ಯಕ್ರಮಗಳಲ್ಲಿ ರಥಬೀದಿ ಗೆಳೆಯರು ಸಂಸ್ಥೆಯ ಕಾರ್ಯಕರ್ತರನ್ನು ಕಾಣಬಹುದು ಎಂಬುದು ನಮ್ಮ ಹಿರಿಮೆ.
21
ನೇ ಶತಮಾನದ ಪಂಥಾಹ್ವಾನ ಆರ್ಥಿಕ ಜಾಗತೀಕರಣ - ಭಾವೀ ವಿಚಾರ ಸಂಕಿರಣ:
ಜಾಗತೀಕರಣ ಪ್ರಕ್ರಿಯೆಯು ಭಾರತದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳ ಮೇಲೆ ಬೀರಿದ ಪ್ರಭಾವವನ್ನೂ, ಜಾಗತಿಕ ವಾಣಿಜ್ಯ ಸಂಸ್ಥೆಯ ಕೃಷಿ, ಸಣ್ಣ ದೊಡ್ಡ ಉದ್ದಿಮೆಗಳ ಮೇಲೆ ಮಾಡಹೊರಟ ಪ್ರಭಾವದ ಬಗ್ಗೆ ಅರಿವು ಮೂಡಿಸುವುದು ನಮ್ಮ ಸದ್ಯದ ತುರ್ತು ಅಗತ್ಯ.ಖ್ಯಾತ ಸಮಾಜವಾದೀ ಚಿಂತಕ ಕಾರ್ಲ್ ಮಾರ್ಕ್ಸ್ 'ಭವಿಷ್ಯದಲ್ಲಿ ಜಗತ್ತು ಕಾರ್ಮಿಕರ ಆಡಳಿತಕ್ಕೊಳಪಡುತ್ತದೆ. ಜಗತ್ತಿನ ಕಾರ್ಮಿಕರು ಒಂದಾಗುತ್ತಾರೆ. ಅಂದು ಜಗತ್ತಿನ ರಾಜ್ಯಗಳು ನಶಿಸಿಹೋಗುತ್ತವೆ. ಎಲ್ಲರು ಎಲ್ಲರಿಗಾಗಿ ಬದುಕುವ ಸಮರಸದ ಬಾಳ್ವೆ ಸಾಧ್ಯವಾಗುತ್ತದೆ ಎಂಬ ಕನಸು ಕಂಡಿದ್ದ. ಇಂದು ಆರ್ಥಿಕ ಜಾಗತೀಕರಣ ಕೂಡಾ ದೇಶಗಳ ಎಲ್ಲೆಯನ್ನು ನಾಶಗೊಳಿಸ ಹೊರಟಿದೆ. ಆದರೆ ಜಗತ್ತು ಕಾರ್ಮಿಕರದ್ದಾಗಿರುವುದಿಲ್ಲ. ಜಗತ್ತು (ವಿದೇಶಿ) ವ್ಯಾಪಾರಿಗಳದ್ದಾಗುತ್ತದೆ. ಸ್ಥಳೀಯ ತಂತ್ರಜ್ಞಾನ, ಕೈಗಾರಿಕೆ, ಕೃಷಿ, ಮೂಲೆಗುಂಪಾಗುವ ಲಕ್ಷಣಗಳು ಈಗಾಗಲೇ ಸ್ಫುಟವಾಗಿ ಕಾಣುತ್ತಿದೆ. ಪರಿಸ್ಥಿತಿ ಅನಿವಾರ್ಯ ಎಂಬಂತೆ ನಮ್ಮ ಕಾನೂನು ಮಾಡುವವರು ಮಾತಾಡುತ್ತಿದ್ದಾರೆ. ದೇಶದ ಜನಜೀವನವೇ ಏರುಪೇರಾಗುತ್ತಿರುವ ಸಂದರ್ಭದಲ್ಲಿ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಅದಕ್ಕಾಗಿ 2001 ಮೇ ತಿಂಗಳಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಒಂದನ್ನು ಜರುಗಿಸುವ ಯೋಜನೆ ಇದೆ.ನಾಟಕ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಿಸರ, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಗಂಭೀರ ಚಿಂತನಗೈಯುವ ಧೀಮಂತ ಸಂಘಟನೆ ಇನ್ನಷ್ಟು ಸಾರ್ವಜನಿಕ ಪ್ರೇರಣೆ ಪ್ರೋತ್ಸಾಹಗಳನ್ನು ನಿರೀಕ್ಷಿಸುತ್ತದೆ

.ಬಳಕೆದಾರರ ವೇದಿಕೆ

ಪ್ರಕಟಣೆ ೨೦೦೧
ಮಣಿಪಾಲದ ಸಿರಂತನದ ಸಹಯೋಗದಲ್ಲಿ ನಾಟಕ ಕೃತಿ ಮತ್ತು ರಂಗಪ್ರಯೋಗದ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತು. ಕನ್ನಡ ನಾಟಕ ಸಾಹಿತ್ಯ ಪರಂಪರೆಯ ಸಮಕಾಲೀನ ಅರ್ಥವಂತಿಕೆಯ ಬಗ್ಗೆ ಅನೇಕ ವಿದ್ವಾಂಸರು ಮಾತನಾಡಿದರು. ಬಿ.ವಿ. ಕಾರಂತರ ರಂಗಪ್ರಯೋಗದ ವಿಶಿಷ್ಟತೆಯ ಬಗ್ಗೆ ಚರ್ಚಿಸಲು ಅರ್ಧದಿನದ ಗೋಷ್ಠಿಯನ್ನು ಮೀಸಲಿಡಲಾಯಿತು. ನಿರ್ದೇಶಕನೊಬ್ಬನ ಸಾಧ್ಯತೆಯ ಬಗ್ಗೆ ಕನ್ನಡದಲ್ಲಿ ಜರಗಿದ ಮೊದಲ ವಿಚಾರ ಸಂಕಿರಣ ಇದು. ಗೋಷ್ಠಿಯಲ್ಲಿ ಗಿರೀಶ್ ಕಾರ್ನಾಡ್, ಲಂಕೇಶ್, ಜಿ.ಬಿ. ಜೋಶಿ, ವಿಜಯಾ, ರಾಮಚಂದ್ರ ಶರ್ಮ, ಪ್ರಸನ್ನ, ಕೆ.ವಿ. ಸುಬ್ಬಣ್ಣ, ಡಿ. ಆರ್. ನಾಗರಾಜ್, ಕೀರ್ತಿನಾಥ ಕುರ್ತಕೋಟಿ, ವೈಕುಂಠರಾಜು, ಶೂದ್ರ ಶ್ರೀನಿವಾಸ್ - ಇವರು ಭಾಗವಹಿಸಿದರು.

No comments:

Post a Comment