Saturday, November 12, 2016

ಜೋಗತಿ ನೃತ್ಯ -ಆತ್ಮಕತೆ - ಸಂವಾದ 14-11-2016

Dr. T. M. A. Pai Literature Chair , Manipal University/ Rathabeedhi Geleyaru [ R } Udupi - Jogathi Nruthya by NANJAMMA JOGATI on14-11-2016  -- 4pm at Ravindra Mantapa , M. G. M. College , Udupi -Welcome














Sunday, September 11, 2016

Use the power of the written word for a positive purpose: Vaidehi

Use the power of the written word for a positive purpose: Vaidehi - The Hindu

ರಥಬೀದಿ ಗೆಳೆಯರು { ರಿ } -ಬಹುಮುಖಿ ಭಾರತ -ಚಿಂತನ ಮಂಥನ  -21- 9-2016

ಬಹುಮುಖಿ ಭಾರತ - ಚಿಂತನ ಮಂಥನ -11- 9-2016

‘ಬಹುಮುಖಿ ಭಾರತ’ ಚಿಂತನ ಮಂಥನ
ಮೋದಿ ಸರಕಾರ ಭ್ರಮೆಗಳನ್ನು ಬಿತ್ತುತ್ತಿದೆ : ಗೌರಿ ಲಂಕೇಶ್
ಮೋದಿ ಸರಕಾರ ಭ್ರಮೆಗಳನ್ನು ಬಿತ್ತುತ್ತಿದೆ. ಅದನ್ನೆ ಸತ್ಯ ಎಂಬುದಾಗಿ ಬಿಂಬಿಸಲಾಗುತ್ತಿದೆ. ಆದರೆ ಅದು ಸತ್ಯ ಅಲ್ಲ, ಕೇವಲ ಭ್ರಮೆ ಆಗಿದೆ ಎಂದು ‘ಗೌರಿ ಲಂಕೇಶ್’ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಟೀಕಿಸಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಬಹುಮುಖಿ ಭಾರತ’ ವೈಚಾರಿಕ ಸಾಹಿತ್ಯ- ಚಿಂತನ- ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಹುಮುಖಿ ಭಾರತವನ್ನು ವಿರೋಧಿಸುವವರು ಕೇವಲ ಬಹುಮುಖಿಯನ್ನು ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೂಡ ವಿರೋಧಿಸುತ್ತಿದ್ದಾರೆ. ಇವರಲ್ಲಿ ಕಾಲ್ಪನಿಕ ರಾಷ್ಟ್ರೀಯತೆ ಹುಟ್ಟುತ್ತದೆಯೇ ಹೊರತು ನಿಜವಾದ ರಾಷ್ಟ್ರೀಯತೆಯಲ್ಲ. ಗೋರಕ್ಷಕರ ದಾಳಿಗೆ ಬಲಿಯಾದ ಪ್ರವೀಣ್ ಪೂಜಾರಿಯ ವಿಚಾರದ ಬಗ್ಗೆ ಧ್ವನಿ ಎತ್ತದವರು, ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಗಾಗಿ ದೊಡ್ಡ ಗಲಾಟೆ ಮಾಡುತ್ತಾರೆ ಎಂದು ಅವರು ಆರೋಪಿಸಿದರು.
ಭಾರತದ ಬಹುಮುಖಿ ಸಂಸ್ಕೃತಿಯು ದೊಡ್ಡ ಅಪಾಯದಲ್ಲಿದೆ. ಅಧಿಕಾರದಲ್ಲಿ ಇರುವವರಿಗೆ ಇಲ್ಲಿನ ಬಹುಮುಖಿ ಸಂಸ್ಕೃತಿ, ಭಾಷೆ, ಧರ್ಮಬೇಕಾಗಿಲ್ಲ. ಪ್ರಜಾಪ್ರಭುತ್ವ ಹಾಗೂ ಬಹುಮುಖಿ ಭಾರತವನ್ನು ಕಾಪಾಡಬೇಕಾದರೆ ಸಹಸ್ರಾರು ವರ್ಷಗಳಿಂದ ನಮ್ಮ ಜೀವನದ ಭಾಗವಾಗಿ ರುವ ಬಹುಮುಖಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವೈದೇಹಿ ಮಾತನಾಡಿ, ಬಹುಮುಖಿ ಭಾರತವು ಇಲ್ಲಿನ ಭಾಷೆ ಹಾಗೂ ಹೆಣ್ಣು ಸತ್ವದಡಿ ನಿಂತಿದೆ. ಅದು ಇಲ್ಲದಿದ್ದರೆ ಇಡೀ ದೇಶ ಹಾಳಾಗುತ್ತದೆ. ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲದೆ ಸಂಬಂಧ ಗಳೇ ಇಲ್ಲವಾಗಿದೆ. ಜನ ಬಹುಮುಖಿಯಿಂದ ಏಕಮುಖಿಯತ್ತ ಸಾಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಹಿಂದು ಮುಸ್ಲಿಮ್ ನಡುವಿನ ಸಣ್ಣ ವಿವಾದವನ್ನೂ ದೊಡ್ಡದಾಗಿ ಪ್ರಕಟಿಸುವ ಮೂಲಕ ಸಮಾಜದಲ್ಲಿ ಬೆಂಕಿ ಹಾಕುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ. ಇದರಿಂದ ಇಂದು ಸಮಾಜದಲ್ಲಿ ಅಶಾಂತಿ ಸೃಷ್ಠಿಯಾಗುತ್ತಿದೆ. ಮಾಧ್ಯಮಗಳಿಗೆ ದೇಶ ಕಟ್ಟುವ ಆಲೋಚನೆಯೇ ಇಲ್ಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಮಾತನಾಡಿದರು.
ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಮುರಳೀಧರ್ ಉಪಾಧ್ಯ ಸ್ವಾಗತಿಸಿದರು. ಹಿರಿಯ ಚಿಂತಕ ಪ್ರೊ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.
ಕೃಪೆ : ವಾರ್ತಭಾರತಿ

ರಥಬೀದಿ ಗೆಳೆಯರು { ರಿ } - ಬಹುಮುಖಿ ಭಾರತ

Wednesday, June 22, 2016

ರಥಬೀದಿ ಗೆಳೆಯರು [ ರಿ } ಉಡುಪಿ - ವಾರ್ಷಿಕ ಮಹಾಸಭೆ 2-7-2016

ರಥಬೀದಿ ಗೆಳೆಯರು [ ರಿ } ಉಡುಪಿ

ತಾರೀಕು 2- 7-2016  ಶವಿವಾರ ಸಂಜೆ 5ಕ್ಕೆ ಸರಿಯಾಗಿ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಸಂಸ್ಥೆಯ ಕಛೇರಿಯಲ್ಲಿ ಕರೆಯಲಾಗಿದೆ.ಸದಸ್ಯರೆಲ್ಲ ಭಾಗವಹಿಸಬೇಕಾಗಿ ವಿನಂತಿ.

- ಪ್ರೊ/ ಸುಬ್ರಹ್ಮಣ್ಯ ಜೋಶಿ
ಕಾರ್ಯದರ್ಶಿ -
 mo no-9880259268

ಶ್ರೀ ಪ್ರಮೋದ್ ಮಧ್ವರಾಜರಿಗೆ ಅಭಿನಂದನೆಗಳು-----ರಥಬೀದಿ ಗೆಳೆಯರು { ರಿ } ಉಡುಪಿ

ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಂಡಿಸ್ ರಿಗೆ ಅಭಿನಂದನೆಗಳು - To The Point with Oscar Fernandes

ಅಹಲ್ಯಾ ಬಲ್ಲಾಳ್- ಡಾ/ ಶ್ರೀಪಾದ ಭಟ್ ನಿರ್ದೇಶಿಸಿದ ನೃತ್ಯ ನಾಟಕ - ಟಾಗೊರ್ ಅವರ -ಚಿತ್ರಾ { Nritya Niketana Kodavoor [ R }

Friday, April 29, 2016

ನಟರಾಜ ಹುಳಿಯಾರ್ - ಕನ್ನಡ ರಂಗಭೂಮಿಯ ನವವಸಂತ!

ಕನ್ನಡ ರಂಗಭೂಮಿಯ ನವವಸಂತ!: ಈ ಅಂಕಣ ಬರೆಯುವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ನಡೆಯುತ್ತಿದೆ.  ರಂಗಪ್ರಿಯರೆಲ್ಲ ಪ್ರೀತಿಯಿಂದ ‘ಸಿ.ಜಿ.ಕೆ.’ ಎಂದು ಕರೆಯುತ್ತಿದ್ದ ಸಿ.ಜಿ. ಕೃಷ್ಣಸ್ವಾಮಿ ರೂಪಿಸಿದ ರಂಗಸಂಸ್ಕೃತಿ ಅಂದಿನಷ್ಟೇ ಕ್ರಿಯಾಶೀಲವಾಗಿದೆ ಎನ್ನಿಸುವಂತೆ ಜನ ನಾಟಕ ನೋಡುತ್ತಿದ್ದಾರೆ.

Saturday, April 23, 2016

ಮಣಿಪಾಲದ ಎಂಡ್‌ ಪಾಯಿಂಟ್‌ನಲ್ಲಿ 3ನೇ ಜಲಾಶಯ

ಎಂಡ್‌ ಪಾಯಿಂಟ್‌ನಲ್ಲಿ 3ನೇ ಜಲಾಶಯ: ಮಣಿಪಾಲದ ಎಂಡ್‌ ಪಾಯಿಂಟ್‌ನಲ್ಲಿ ಮೂರನೇ ಜಲಾಶಯ ನಿರ್ಮಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Monday, April 18, 2016

ಗುಬ್ಬಿಯಲ್ಲಿ ರಾಷ್ಟ್ರೀಯ ರಂಗೋತ್ಸವ 20- 4-2014 ರಿಂದ

ಗುಬ್ಬಿಯಲ್ಲಿ ಬುಧವಾರದಿಂದ ರಾಷ್ಟ್ರೀಯ ರಂಗೋತ್ಸವ: ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಜಂಟಿಯಾಗಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಏಪ್ರಿಲ್‌ 20ರಿಂದ 24ರವರೆಗೆ ‘ರಾಷ್ಟ್ರೀಯ ರಂಗೋತ್ಸವ’ ಆಯೋಜಿಸಿವೆ.

ಮೈಸೂರಿನಲ್ಲಿ ಉಡುಪಿಯ ರಥಬೀದಿ ಗೆಳೆಯರ ನಾಟಕ - ಮಹಿಳಾ ಭಾರತ -24-4-2016

Sunday, April 10, 2016

‘ಹುತ್ತವ ಬಡಿದರೆ’ ಹಾವು ಸಾಯುವುದಿಲ್ಲ...

‘ಹುತ್ತವ ಬಡಿದರೆ’ ಹಾವು ಸಾಯುವುದಿಲ್ಲ...: ‘ಹುತ್ತವ ಬಡಿದರೆ’ ಹವ್ಯಾಸಿ ರಂಗಭೂಮಿಗೆ ತಿರುವು ತಂದ ನಾಟಕ. ಬೆಂಗಳೂರಿನಲ್ಲಿ ಈ ನಾಟಕದ ಪ್ರದರ್ಶನದೊಂದಿಗೆ ಸಮುದಾಯ ರಂಗ ತಂಡ 1975ರಲ್ಲಿ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ಹಲವು ಕಡೆ ತನ್ನ ಶಾಖೆಗಳನ್ನು ಆರಂಭಿಸಿ ವೈಚಾರಿಕ ನಾಟಕಗಳ ಆಂದೋಲನವನ್ನೇ ಶುರುಮಾಡಿತು.

Tuesday, March 29, 2016

ಉಡುಪಿಯಲ್ಲಿ ಸುಸಜ್ಜಿತ ಗ್ರಂಥಾಲಯ: ಪ್ರಮೋದ್‌

ಉಡುಪಿಯಲ್ಲಿ ಸುಸಜ್ಜಿತ ಗ್ರಂಥಾಲಯ: ಪ್ರಮೋದ್‌: ಉಡುಪಿ ನಗರದಲ್ಲಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಾದ ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Monday, March 7, 2016

“ಎಂದೂ ಕೇಳಿರದ ಕಥೆ.. ‘ಅನಾಹತ’ “

ಮೌಲ್ಯ ಸಂಘರ್ಷದ ಚಿತ್ರಣ ‘ಒರೆಸ್ತಿಸ್ ಪುರಾಣ’

ಮೌಲ್ಯ ಸಂಘರ್ಷದ ಚಿತ್ರಣ ‘ಒರೆಸ್ತಿಸ್ ಪುರಾಣ’: ಮನುಷ್ಯ ಸಮಾಜದ ಮೌಲ್ಯಪಲ್ಲಟಗಳನ್ನು ಮನೋಜ್ಞವಾಗಿ ಚಿತ್ರಿಸುವ ‘ಒರೆಸ್ತಿಸ್ ಪುರಾಣ’ ಗ್ರೀಕ್‌ ನಾಟಕವನ್ನು (ಕನ್ನಡಾನುವಾ:ದಡಾ.ವಿಜಯಾ ಗುತ್ತಲ) ಹೆಗ್ಗೋಡಿನ ನೀನಾಸಮ್‌ ಸ್ಥಳೀಯರ ತಂಡ ಇತ್ತೀಚೆಗೆ ರಂಗಶಂಕರದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿತು.