Tuesday, September 15, 2015

Monday, August 17, 2015

ಶೇಕ್ಸ್ ಪಿಯರ್ 450 ---30- 8- 2015

ಶೇಕ್ಸ್ ಪಿಯರ್ -450

ವಿಶೇಷ ಉಪನ್ಯಾಸ -

    ಶ್ರೀ  ಎಚ್. ಎಸ್. ಉಮೇಶ್ , ಮೈಸೂರು

 - ತುಳುವಿನಲ್ಲಿ   ಶೇಕ್ಸ್ ಪಿಯರ್Image result for shakespeare
 - ಕನ್ನಡದಲ್ಲಿ ಶೇಕ್ಸ್ ಪಿಯರ್ ಸುನೀತಗಳು - ಕವಿತಾ ವಾಚನ
 ಸ್ಥಳ
        ಧ್ವನ್ಯಾಲೋಕ ,
         ಗೋವಿಂದ ಪೈ ಕೇಂದ್ರ , ಉಡುಪಿ
         30- 8-2015 - ಸಂಜೆ  4pm
        ನಿಮಗೆ ಸ್ವಾಗತ

- ರಥಬೀದಿ ಗೆಳೆಯರು [ ರಿ } ಉಡುಪಿ

    - ಕರ್ನಾಟಕ ಸಾಹಿತ್ಯ          ಅಕಾಡೆಮಿ ಸಹಯೋಗದ ಕಾರ್ಯಕ್ರಮ

ಬೋಲ ಚಿತ್ತರಂಜನದಾಸ ಶೆಟ್ಟರ ’ ಶ್ರೀ ಮಧ್ವ ಪ್ರಾಣ ದೇವರು’ ಬಿಡುಗಡೆ -22-8-2015

ಶ್ರಿ ಬೋಲ ಚಿತ್ತರಂಜನದಾಸ ಶೆಟ್ಟರ ಗ್ರಂಥ

--ಶ್ರೀ ಮಧ್ವಪ್ರಾಣ ದೇವರು

ಬಿಡುಗಡೆ ಸಮಾರಂಭ - 22-8-2015 -ಶನಿವಾರ- 5pm
  ಮಧ್ವ ಮಂಟಪ - ಶ್ರೀ ಕೃಷ್ಣ ಮಠ , ಉಡುಪಿ
 ಆಶೀರ್ವಚನ -
            ಶ್ರೀ ಶ್ರೀ ವಿದ್ಯಾವಲ್ಲಭ ಶ್ರೀಪಾದರು
             ಪರ್ಯಾಯ ಕಾಣಿಯೂರು ಮಠ , ಉಡುಪಿ
 ಕಾವ್ಯ ವಾಚನ
          ಶ್ರಿ  ಚಂದ್ರಶೇಖರ  ಕೆದ್ಲಾಯ ಮತ್ತು ಬಳಗ
     ನಿಮಗೆ ಸ್ವಾಗತ

Tuesday, July 28, 2015

Pejawar seer to hold talks on change of Paryaya durbar venue -

ಮಹಿಳಾ ಭಾರತ -ಅದ್ಭುತ ಪ್ರದರ್ಶನ -ಜಿ.ಎನ್.ಅಶೋಕವರ್ಧನ

ಮಹಿಳಾ ಭಾರತ – ಅದ್ಭುತ ಪ್ರದರ್ಶನ
ಡಾ| ಶ್ರೀಪಾದಭಟ್ಟರ ನಿರ್ದೇಶನ, ಉಡುಪಿಯ ರಥಬೀದಿ ಗೆಳೆಯರ ನಿರ್ಮಾಣ/ಪ್ರದರ್ಶನ, ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳ ಅಂದರೆ ಪೂರ್ಣ ಹವ್ಯಾಸಿಗಳ (ಎಷ್ಟೋ ಪ್ರಥಮ ರಂಗಪ್ರವೇಶವೂ ಇರಬಹುದು) ಅಭಿನಯ, ಮಲಯಾಳದ ಮಾಧವನ್ ಅವರ ಮೂಲ, ಕನ್ನಡದ ಪುನರ್ರಚನೆ ಅಭಿಲಾಷ.... ಹೀಗೆ ನಿನ್ನೆ ಪ್ರಥಮ ಪ್ರದರ್ಶನವಾಗಿ ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮೂಡಿದ `ಮಹಿಳಾ ಭಾರತ’ ನಾಟಕದ ಕುರಿತು ಉದ್ದನ್ನ ಪಟ್ಟಿ ಬರೆದರೆ ನೀರಸ ವರದಿಯಾದೀತು. ಯಾವ ಪೂರ್ವಪಕ್ಷವೂ ಇಲ್ಲದೆ, ಕೇವಲ ಮುರಳೀಧರ ಉಪಾಧ್ಯೆ ಇವರ ಸ್ನೇಹಾಚಾರದ ಚರವಾಣಿ-ಕಿರುಸಂದೇಶದ ಎಳೆ ಹಿಡಿದು ಮಂಗಳೂರಿನಿಂದ ಹೋಗಿ, ನೋಡಿ, ಬಂದು, ರಾತ್ರಿ ಕಳೆದರೂ ಒಂದಿಷ್ಟೂ ಮಾಸದೇ ಉಳಿದ ಪ್ರಭಾವಕ್ಕೆ ಅನ್ಯಾಯವಾದೀತು. ಕ್ಯಾಮರಾ, ಚರವಾಣಿ ಇರಲಿ, ಕಣ್ಣು ಬಿಟ್ಟು ನೋಡಿದ್ದೇ ಸಾಕು ಪ್ರತಿ ನಡೆ, ಸನ್ನಿವೇಶವೂ ವಿಶಿಷ್ಟ ಭಿತ್ತಿ ಚಿತ್ರದಂತೆ ಮನದಲ್ಲಿ ಕಚ್ಚಿನಿಲ್ಲುವಂಥ ದೃಶ್ಯಗಳು ಇದರದು. ಗಾಢ ಪರಿಣಾಮಕ್ಕೆ ಪ್ರಭಾವಿಯಾಗಿಯೇ ಸೇರಿಕೊಂಡ ಹಿಮ್ಮೇಳ; ಧ್ವನಿಮುದ್ರಿತವೇ ಆದರೂ “ತಾಂತ್ರಿಕ ಕೊರತೆಯ ಕ್ಷಮೆ” ಕೇಳಬೇಕಿಲ್ಲದ ಸಾಧನೆ. ನೆರಳು ಬೆಳಕಿನ ಮಾಯಾಲೋಕ, ರಂಗಸಜ್ಜಿಕೆಯ ಭಾರೀ ಚಮತ್ಕೃತಿ, ವೇಷಭೂಷಣಗಳ ಮೋಹಕತೆ, ವಿಶೇಷ ಅಂಗಸಾಧನೆಯ ಪರಿಪಾಕಗಳೇನಿಲ್ಲದಿದ್ದರೂ ಭವನ ತುಂಬಿ ಹರಿದ ಪ್ರೇಕ್ಷಾವೃಂದವನ್ನು ಕ್ಷಣಕಾಲವೂ ಉಸಿರು ಸರಾಗವಾಡದಂತೆ ಹಿಡಿದಿಟ್ಟ ಖ್ಯಾತಿ ಈ ಪ್ರದರ್ಶನಕ್ಕೆ ಸಲ್ಲುತ್ತದೆ. ವೈಚಾರಿಕ ಹದ ಮತ್ತು ತೂಗಿ ಇಟ್ಟ ಮಾತಿನ ಘನತೆಯನ್ನು ಪ್ರಾಮಾಣಿಕವಾಗಿ ಅನುಭವಿಸಿ ಒಪ್ಪಿಸಿದ ಪರಿ ಅದ್ಭುತವಾಗಿತ್ತು. ಬಹುಶಃ ಬರಿಯ ಬಾಯಿಪಾಠವಾಗಿದ್ದರೆ ನಡೆಯಲ್ಲಿ ಅಸಾಂಗತ್ಯ, ನುಡಿಯಲ್ಲಿ ತೊದಲು ಹಣಿಕಲೇ ಬೇಕಾದ ಗಂಭೀರ ಪ್ರಸಂಗವಿದು. ಇದ್ದ ನಾಟಕೀಯ ನಡೆಗಳಾದರೂ ಆರೋಪಿತ ಅಭಿನಯವಾಗದ ಎಚ್ಚರ ಎಲ್ಲರಲ್ಲಿತ್ತು. ಮಗುವಿನ ನಿದ್ರೆ, ಹಿರಿಯಳ ಶಾಶ್ವತ ನಿದ್ರೆಗಳ ಸಮಾಗಮದೊಡನೆ ತೆರೆದುಕೊಳ್ಳುವ ಕಥನ ಪುರಾಣ, ಐತಿಹ್ಯ, ಇತಿಹಾಸ ಮತ್ತು ಸ್ವಾನುಭವಗಳನ್ನು ಕಾಲಬೇಧದ ಗೂಡುಗಳಲ್ಲಿಡದೆ, ಭಾಷಾಬೇಧಗಳ ಕಟ್ಟಿಗೊಳಪಡಿಸದೆ ವರ್ತಮಾನದ ಕಲಾಪಗಳ ಮೂಲಕ ವಿಮರ್ಶಿಸುವ ಕ್ರಮ ಗಂಭೀರದಿಂದ ಅತಿ ಗಂಭೀರದವರೆಗೆ, ಅಂದರೆ ನಾಟಕದ ಕೊನೆಯವರೆಗೂ ವಿಕಸಿಸುತ್ತಲೇ ಹೋಗುತ್ತದೆ. ಪ್ರೇಕ್ಷಕ ಒಂದೊಂದೂ ಮಾತು, ಸನ್ನಿವೇಶವನ್ನು “ನಿಜ, ನಿಜ” ಎಂದು ಗ್ರಹಿಸುವುದರೊಡನೆ, “ಮುಂದೇನು, ಮುಂದೇನು” ಎಂಬ ಆತಂಕಭರಿತ ನಿರೀಕ್ಷೆಯನ್ನು ಬಹುಸಂಖ್ಯೆಯಲ್ಲಿ ಗುಡ್ಡೆ ಹಾಕಿಕೊಳ್ಳುವಂತಾಗಿತ್ತು. “ಮಹಾಭಾರತ ಅಂದರೆ ಒಂದು ಹೆಂಗಸು, ಮತ್ತೊಂದು ಚಕ್ರ” ಎಂಬರ್ಥದ ಮಾತು ನಾನು ಎಲ್ಲೋ ಕೇಳಿದ್ದು `ಮಹಿಳಾಭಾರತ’ದಲ್ಲಿ ಮತ್ತೆ ಸಾರ್ಥಕವಾಯ್ತು. ಶ್ರೀಪಾದ ಭಟ್ಟರ ಸಾಮರ್ಥ್ಯಕ್ಕೆ ನಮೋ, ತಂಡದ ಸಾಧನೆಗೆ ಇದ್ದೆಲ್ಲ ಸ್ವರಭಾರ ಹಾಕಿ ಹೇಳುತ್ತೇನೆ ಶಹಭಾಸ್!
[ಎರಡು ವಿಡಿಯೋ ತುಣುಕುಗಳಿಗಾಗಿ ಈ ಸೇತು ಬಳಸಿ: http://youtu.be/WCngi5A7BT8
http://youtu.be/AI5Ia803Tyw]
— with Sukanya Kalasa and 3 others.

ಮಹಿಳಾ ಭಾರತ - Mahila bharatha 2

ಮಹಿಳಾ ಭಾರತ Mahila bharatha 1

Tuesday, July 21, 2015

ರಥಬೀದಿ ಗೆಳೆಯರು { ರಿ } ಉಡುಪಿ- ಮಹಿಳಾ ಭಾರತ - ನಿ- ಡಾ / ಶ್ರೀಪಾದ ಭಟ್ - 26- 7-2015

ಮಹಿಳಾ ಭಾರತ - ನಿ- ಡಾ / ಶ್ರೀಪಾದ ಭಟ್

. 8 ಜನ ಮಹಿಳೆಯರು ಒಬ್ಬ ಪುರುಷ ಪಾತ್ರಧಾರಿ ಇರುವ ಈ ನಾಟಕ ಎತ್ತಿಕೊಳ್ಳುವ ಸಂದರ್ಭವೇ ಒದಗಿ ಬಂದಿರಲಿಲ್ಲ. ಈಗ ರಂಗಕ್ಕೆ ಬರುತ್ತಿದೆ. ಈ ಮೊದಲು ನನ್ನ ನಿರ್ದೇಶನದ ಕೆಲ ಮಕ್ಕಳ ನಾಟಕದಲ್ಲಿ ಅಭಿನಯಿಸಿದ ಹುಡುಗಿಯರು ಕಾಲೇಜು ಓದುತ್ತಿದ್ದಾರೆ, ಅವರಿಗಾಗಿ ರಂಗ ತರಬೇತಿ ಆಯೋಜಿಸುವ ಸಂದರ್ಭ ಒದಗಿಬಂತು. ಹೀಗಾಗಿ ಈ ನಾಟಕ ರಂಗಕ್ಕೆ ಬರುತ್ತಿದೆ. ತುಂಬ ಸವಾಲಿನ, ನಾನು ಇದುವರೆಗೂ ನಿರ್ದೇಶಿಸಿದ ನಾಟಕಗಳಲ್ಲಿಯೇ ವಸ್ತುವಿನ ಕಾರಣಕ್ಕಾಗಿ ತಲೆಕೆಡಿಸಿದ ನಾಟಕವಿದು. ಮೊದಲ ಭಾರಿ ದೊಡ್ಡವರ ನಾಟಕಕ್ಕೆಂದು ರಂಗಕ್ಕೇರುತ್ತಿರುವ ಹುಡುಗಿಯರಿಗೆ, ಇದನ್ನು ಸಂಘಟಿಸುತ್ತಿರುವ ರಥಬೀದಿ ಗೆಳೆಯರಿಗೆ, ನನ್ನೊಡನಿರುವ ಪ್ರಸಾದ ರಾವ್, ಸಂತೋಷ ಪಟ್ಲಾ, ಗಣೇಶ ಉಡುಪಿ, ಪ್ರಥ್ವಿನ್, ರಾಜು ಮಣಿಪಾಲ, ನಾಗೇಂದ್ರ ಪೈ ಅವರಿಗೆ, ರಂಗ ಸಜ್ಜಿಕೆ ವಿನ್ಯಾಸ ಗೊಳಿಸಿದ ಕಿರಣ ಭಟ್, ನಿರ್ಮಾಣಗೊಳಿಸಿದ ದಾಮು ಹೊನ್ನಾವರ, ಪ್ರಶಾಂತ ಉದ್ಯಾವರ, ನೃತ್ಯ ಸಂಯೋಜಿಸಿದ ಮಂಜುಳಾ ಸುಬ್ರಹ್ಮಣ್ಯ, ತಾಲೀಮಿಗೆ ಸ್ಥಳ ನೀಡಿದ ಎಂ.ಜೆ.ಸಿ.ಮಣಿಪಾಲ , ಚೆಂದದ ಚಿತ್ರ ನೀಡಿದ ಚೇತನಾ ಅರ್ಥಾತ್ ಅಲವಿಕಾ ಲ಻ ಅವರಿಗೆ ಧನ್ಯವಾದಗಳು. 26 ಜುಲೈ ಉಡುಪಿಯಲ್ಲಿ ನಾಟಕ ಪ್ರದರ್ಶನ. ನನ್ನ ನೆಚ್ಚಿನ ಸಾಹಿತಿ ವೈದೇಹಿ ಉದ್ಘಾಟಿಸಲಿದ್ದಾರೆ. ನೀವೂ ಬನ್ನಿ
 ಮಹಿಳಾ ಭಾರತ -
 ಮೂಲ- ಮಾಧವನ್ ಪಾಂಡಿಚೇರಿ
  ಕನ್ನಡ ರೂಪಾಂತರ - ಅಭಿಲಾಷಾ . ಎಸ್.
 ನಿ- ಶ್ರೀಪಾದ ಭಟ್

Pejawar Math seer to ascend Paryaya Peetha for fifth time -

ಪೇಜಾವರ ಪರ್ಯಾಯ - ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಆದ್ಯತೆ

Tuesday, May 12, 2015

ಪೀಯೂಷ್ ಮಿಶ್ರಾ - Walk The Talk with Piyush Mishra

ಗ್ರಾಪಂ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ

ಗ್ರಾಪಂ ಚುನಾವಣೆ: ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ - Indiatimes Vijaykarnatka:



'via Blog this'

ಅದಾನಿ ತೆಕ್ಕೆಯಲ್ಲಿ ಯುಪಿಸಿಎಲ್ ಕಂಪೆನಿ

ಅದಾನಿ ತೆಕ್ಕೆಯಲ್ಲಿ ಯುಪಿಸಿಎಲ್ ಕಂಪೆನಿ | ಪ್ರಜಾವಾಣಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ | Kannadaprabha.com

SSLC Results 2015 declared | ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ | Kannadaprabha.com:



'via Blog this'SSLC Results 2015 declared

ಉಡುಪಿ - ₹20.35 ಕೋಟಿ ಮಂಜೂರು

₹20.35 ಕೋಟಿ ಮಂಜೂರು | ಪ್ರಜಾವಾಣಿ

ಭೋಗತಪ್ತ ಲೋಕದಲ್ಲಿ ಹಸಿದ ಕಲ್ಲುಗಳು

ಭೋಗತಪ್ತ ಲೋಕದಲ್ಲಿ ಹಸಿದ ಕಲ್ಲುಗಳು | ಪ್ರಜಾವಾಣಿ

Friday, May 8, 2015

ಥೀಯೇಟರ್ ಸಮುರಾಯ್ - ’ ಹಸಿದ ಕಲ್ಲುಗಳು - ಸಂತೋಷ್ ನಾಯಕ್ ಪಟ್ಲ



ರಂಗಕ್ರಿಯೆಯ ಒಂದು ಹೊಸ ವ್ಯಾಕರಣ - ಹಸಿದ ಕಲ್ಲುಗಳು
ಉಡುಪಿಯ ಸಾಂಸ್ಕೃತಿಕ ವಲಯದ ಮಂಚೂಣಿ ರಂಗ ಸಂಸ್ಥೆ ರಥಬೀದಿ ಗೆಳೆಯರು ಇವರ ಆಶ್ರಯದಲ್ಲಿ ಆಯೋಜಿಸಲ್ಪಟ್ಟ 'ಥಿಯೇಟರ್ ಸಮುರಾಯ್' ಅಭಿನಯದಲ್ಲಿ ರಂಗ ಪ್ರಸ್ತುತಿಗೊಂಡ ರವೀಂದ್ರನಾಥ್ ಠಾಗೂರರ 'ಹಂಗ್ರಿ ಸ್ಟೋನ್' ಕಥೆ ಆಧಾರಿತ ನಾಟಕ 'ಹಸಿದ ಕಲ್ಲುಗಳು' ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಹಲವು ಕಾರಣಗಳಿಗಾಗಿ ಈ ನಾಟಕ ಇವತ್ತಿನ ರಂಗ ಪ್ರಸ್ತುತಿಗಳಲ್ಲಿ ಒಂದು ಮೈಲಿಗಲ್ಲು ಎಂದು ನನಗನಿಸುತ್ತದೆ.
ಕಳೆದ ಕೆಲವು ವರ್ಷಗಳಿಂದ ಪ್ರಯೋಗ ರಂಗಭೂಮಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಎಲ್ಲೋ ಒಂದು ಕಡೆ ನಟನೆ, ರಂಗ ವಿನ್ಯಾಸ, ರಂಗ ಸಂಗೀತ, ಮತ್ತು ಭಾಷೆಗಳ ಬಳಕೆಯಲ್ಲಿ ಏಕತಾನತೆಯತ್ತ ಸಾಗುತ್ತಿದೆಯೋ ಎಂದು ಅನಿಸುತ್ತಿದ್ದಾಗ, ಹೈಸ್ನಾಂ ತೋಂಬಾ ನಿದರ್ೇಶನದ ಹಸಿದ ಕಲ್ಲುಗಳು ನಾಟಕ ರಂಗಕ್ರಿಯೆಯ ಒಂದು ಹೊಸ ಆಯಾಮವನ್ನು ನಮ್ಮ ಮುಂದಿಟ್ಟಿದೆ. ಅದರಲ್ಲೂ ನಟರನ್ನು ದುಡಿಸಿಕೊಂಡಿರುವ ರೀತಿ, ಮತ್ತು ರಂಗಕ್ರಿಯೆಗಳನ್ನು ಜೋಡಿಸಿರುವ ರೀತಿ, ರಂಗಕ್ರಿಯೆಯ ಹೊಸ ಪರಿಕಲ್ಪನೆಯತ್ತ ನಮ್ಮನ್ನು ಆಲೋಚಿಸುವಂತೆ ಮಾಡಿದೆ. ಆದ್ದರಿಂದ ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರಿಗೆ ಇದೊಂದು ಅಭ್ಯಾಸದ ಒಂದು ಮಾದರಿಯಾಗಿಯೂ ಕಾಣಿಸುತ್ತಿದೆ.
ನಿಜಾಮರ ಪ್ರತಿನಿಧಿಯಾದ ಟ್ಯಾಕ್ಸ್ ಕಲೆಕ್ಟರ್ ಒಮ್ಮೆ ಹಳೆಯ ಮತ್ತು ಶಿಥಿಲ ಅರಮನೆಯೊಂದರಲ್ಲಿ ಕಾವಲುಗಾರನ ಎಚ್ಚರಿಕೆಯನ್ನು ಧಿಕ್ಕರಿಸಿ ಅಲ್ಲೆ ಉಳಿಯಲು ನಿರ್ಧರಿಸುತ್ತಾನೆ. ಅಲ್ಲಿಯ ವಾಸ್ತುಶಿಲ್ಪದ ಮೋಡಿಗೊಳಗಾಗಿ ಅರೇಬಿಯನ್ ನೈಟ್ಸ್ ನ ಪಶರ್ಿಯನ್ ಕನ್ಯೆಯರನ್ನು ತಮಾಶೆಗೆಂದು ನೆನಪಿಸಿಕೊಳ್ಳುತ್ತಲೇ ತನ್ನ ಕಲ್ಪನಾ ಲೋಕದಲ್ಲಿ ನಿಜವೆನ್ನುವಂತೆ ಬೆರೆತು ಹೋಗುತ್ತಾನೆ. ಅಲ್ಲಿನ ಸ್ತ್ರೀರೂಪಿ ಪ್ರತಿಮೆಗಳು ರಾತ್ರಿಯಾಗುತಿದ್ದಂತೆ, ಜೀವ ತಳೆದು ಮಾಯಾಂಗನೆಯರಂತಾಗಿ ಅವನನ್ನು ಉನ್ಮತ್ತತೆಯಲ್ಲಿ ಮುಳುಗಿಸುತ್ತವೆ. ಒಂದೊಂದು ಸ್ತ್ರೀ ಪ್ರತಿಮೆಯೂ ಒಂದೊಂದು ಯಾತನಾಮಯ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಹಿಸಲಾಗದ ತಮ್ಮ ಹೆಣ್ಣುಜೀವದ ನೋವನ್ನು ಬಿಚ್ಚಿಡುತ್ತಾ ಗಂಡಸಿನ ಕಲ್ಪನಾ ಲೋಕದಲ್ಲಿ ನಿಮರ್ಾಣಗೊಂಡ ತಮ್ಮ ನಿಜ ಜಗತ್ತಿನ ಕರಾಳತೆಯನ್ನು ಕಾಣಿಸುತ್ತಾ ಹೋಗುತ್ತವೆ.
ಕಲ್ಪನೆ ಮತ್ತು ನಿಜದ ಸಂಗತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವ ನಿದರ್ೇಶಕ ಹೈಸ್ನಾಂ ತೋಂಬ, ಹೆಣ್ಣು ಮತ್ತು ಕುದುರೆಗಳ ಪ್ರತಿಮೆಗಳನ್ನಿಟ್ಟುಕೊಂಡು ಗಂಡಿನ ಭಾವನಾತ್ಮಕ ಹಾದರವನ್ನು, ದಬ್ಬಾಳಿಕೆಯನ್ನು ರಂಗದ ಮೇಲೆ ಅದ್ಭುತವಾಗಿ ಕಟ್ಟಿ ಕೊಡುತ್ತಾರೆ. ನಾವು ಹೆಂಗಸರು ಅನಾದಿ ಕಾಲದಿಂದ ಪಾರಾಗಿ ಬಂದಿದ್ದೇವೆ ಬರಿದೆ ಕಲ್ಲಿನ ವಿಗ್ರಹದಂತೆ ಬರಿದೆ ಕಲ್ಲಿನಂತೆ ಜೀವಿತಾವಧಿಯನ್ನು ಕಳೆದಿದ್ದ ಪ್ರತಿಮೆಗಳು ಅಂತರಂಗವನ್ನು ಬಿಚ್ಚಿಡುವ ರೀತಿ, ಗಂಡಸಿನ ಕಲ್ಪನಾಲೋಕದಲ್ಲಿ ಗರಿಗೆದರುವ ಕಾಮನೆಗಳು ಇವೆಲ್ಲವನ್ನೂ ವರ್ತಮಾನದ ಕಾಲಘಟ್ಟದಲ್ಲಿ ಸಮೀಕರಿಸಿರುವ ರೀತಿ ಒಂದು ಗಂಭೀರ ಸಿನೆಮಾದಲ್ಲಿ ಜೋಡಿಸಿದ ದೃಶ್ಯಗಳಂತೆ ಬಂದು ಹೋಗುತ್ತವೆ.
ಗಂಭೀರವಾದ ಮೌನದೊಂದಿಗೆ ಆರಂಭಗೊಳ್ಳುವ ನಾಟಕವು ಪ್ರತಿಮೆಗಳ ಸ್ಥಿರಗೊಳ್ಳುವಿಕೆಯಿಂದ ಆರಂಭವಾಗುತ್ತದೆ. ರಂಗದ ಮೇಲೆ ಏನೂ ಮಾಡದೆ ಇರಬಹುದಾದುದೂ ಒಂದು ರಂಗಕ್ರಿಯೆ ಎಂಬ ಪ್ರಸನ್ನರ ಮಾತಿನಂತೆ, ದೀರ್ಘಕಾಲದವರೆಗೆ ಪಾತ್ರಗಳು ರಂಗದ ಮೇಲೆ ಸ್ಥಿರಗೊಳ್ಳುವುದು, ಒಡಲೊಳಗೆ ನೋವಿನ ಸರಮಾಲೆಯನ್ನೇ ಇಟ್ಟುಕೊಂಡು ಪ್ರದಶರ್ಿಸುವ ರಂಜನೆಯ ಹಾವಭಾವಗಳು, ಕಿರಿಕಿರಿಯಾದರೂ ಮತ್ತೆ ತನ್ನ ಕಲ್ಪನಾ ಲೋಕದಲ್ಲಿ ಹರಿದಾಡುವ, ಮತ್ತೆ ಮತ್ತೆ ಅದೇ ಅನುಭೂತಿ ಪಡೆಯಲು ಬಯಸುವ ಕಲೆಕ್ಟರ್ ನಿಜ ಮತ್ತು ಕಲ್ಪನೆಗಳ ನಡುವೆ ಸಿಲುಕಿ ಇವೆಲ್ಲದರಿಂದ ಹೊರಬರಬೇಕೆಂದರೂ ಹೊರಬರಲಾಗದೆ ನಾನು ಇಲ್ಲಿಂದ ಪಾರಾಗುವದಾರಿ ತೋರಿಸಿ ಎಂದು ಬೊಬ್ಬಿಡುತ್ತಾ ಕೊನೆಗೆ ಹೆಣ್ಣೆನಲ್ಲಿ ಕಂಡುಕೊಳ್ಳುವ ನಿಜದ ಮಾತೃಪ್ರೇಮ ಇವೆಲ್ಲವೂ ಸ್ಪಷ್ಟವಾದ ರಂಗಕ್ರಿಯೆಗಳ ಮೂಲಕ ಸ್ಥಾಪಿತಗೊಳ್ಳುತ್ತವೆ.
ಈ ನಾಟಕದ ಪಾತ್ರಗಳ ನಟನೆಯ ಹಿಂದೆ ಒಂದು ಧ್ಯಾನಸ್ಥ ಸ್ಥಿತಿ ಕಂಡು ಬರುತ್ತದೆ. ಈ ಧ್ಯಾನಸ್ಥ ಸ್ಥಿತಿ ಇಲ್ಲದಿರುತಿದ್ದರೆ ಒಂದೊಂದು ಅನುಭೂತಿಯನ್ನು ಅಷ್ಟೊಂದು ತೀವ್ರವಾಗಿ ದಾಟಿಸಲು ಸಾಧ್ಯವಾಗುತ್ತಿರಲಿಲ್ಲವೇನೋ. ಸಾಮಾನ್ಯವಾದ ನಟನೆಯ ಭಾಷೆಗಿಂತ ತುಸು ಭಿನ್ನವಾದ ನಟನೆಯ ವ್ಯಾಕರಣ ಈ ನಾಟಕದ ವೈಶಿಷ್ಟ್ಯ ತುಸು ಧೀರ್ಘವಾದ, ತೀವ್ರವಾಗಿ ಸ್ಪಂದಿಸುವ, ಮೈಯ ಕಸುವಿನೊಂದಿಗೆ ಜಿದ್ದಾಡುವ ದೇಹಭಾಷೆಯನ್ನು ರಂಗಭಾಷೆಯಾಗಿಸಿ ಕೊಂಡ ಈ ಪ್ರಯೋಗ ಬಹಳದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹುದು.
ರಂಗದ ಮೇಲೆ ಅತೀಕಡಿಮೆ ಮಾತಾಡುವ ಪಾತ್ರಗಳು ದೇಹಭಾಷೆಯ ಮೂಲಕ ಪ್ರೇಕ್ಷಕರೊಂದಿಗೆ ಸಂವಹನ ನಡೆಸುತ್ತವೆ. ಸಂಗೀತ ಮತ್ತು ಬೆಳಕನ್ನು ಬಹಳ ಸಂಯಮದಿಂದ ಬಳಸುವ ನಿದರ್ೇಶಕ ನಾಟಕವನ್ನು ತಾಂತ್ರಿಕವಾಗಿ ವಿಜೃಂಭಿಸದೆ ನಟರುಗಳ ಶಕ್ತಿಯ ಮೇಲೆ ನಾಟಕ ಕಟ್ಟುವ ಪ್ರಯತ್ನ ಮಾಡಿರುವುದು ಸ್ತುತ್ಯಾರ್ಹ. ಒಂದು ಹೊಸ ರಂಗಪ್ರಯೋಗ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರೇಕ್ಷಕರ ತಾಳ್ಮೆಯನ್ನೂ ಪರೀಕ್ಷಿಸುವ ಈ ನಾಟಕ ನಮ್ಮ ನಡುವೆ ಇರುವ ರಂಗವ್ಯಾಕರಣವನ್ನು ಒಡೆದು ಕಟ್ಟಿದೆ. ನಟನೆಯ ಭಾಷೆ, ಮತ್ತು ರಂಗಕ್ರಿಯೆಗಳ ಜೋಡಣೆ ಮತ್ತು ಪ್ರಸ್ತುತಿಯಲ್ಲಿ ಈ ನಾಟಕವನ್ನು ಆಧಾರವಾಗಿಸಿ ಯೋಚಿಸಲು ಅವಕಾಶ ನೀಡಿದೆ. ನಮ್ಮ ಆಲೋಚನೆಗಳನ್ನು ಜಾಗೃತಗೊಳಿಸಿದ, ಹೊಸ ರಂಗನುಭೂತಿಯನ್ನು ನೀಡಿದ ಹೈಸ್ನಾಂ ತೋಂಬ ಮತ್ತು ಥಿಯೇಟರ್ ಸಮುರಾಯ್ ತಂಡದ ಎಲ್ಲ ರಂಗ ಗೆಳೆಯರಿಗೆ ಧನ್ಯವಾದಗಳು.
ಸಂತೋಷ್ ನಾಯಕ್ ಪಟ್ಲ.

Saturday, March 7, 2015

ಚಂಪಾ ಶೆಟ್ಟಿ - Champa Shetty speaks about SANCHARI SADAGARA

ರಥಬೀದಿ ಗೆಳೆಯರು [ ರಿ ] ಉಡುಪಿ -ಮುರಾರಿ ಬಲ್ಲಾಳ್ / ಕೆ. ಎಸ್. ಕೆದ್ಲಾಯ ನೆನಪಿನ ರಂಗೋತ್ಸವ -ಮಾರ್ಚ್ 11,12, 13 ---2015

ರಥಬೀದಿ ಗೆಳೆಯರು [ ರಿ ] ಉಡುಪಿ -11-3-2015 - ನಾಟಕ-ಭೀಮಾಯಣ

ರಥಬೀದಿ ಗೆಳೆಯರು [ ರಿ ] ಉಡುಪಿ - ನಾಟಕ - ಅಕ್ಕು -12- 3-2015

ರಥಬೀದಿ ಗೆಳೆಯರು [ ರಿ ] - ಉದುಪಿ -13-3-2015- ನಾಟಕ- ಇಲ್ಲಾ ಅಂದ್ರೆ ಇದೆ

ರಥಬೀದಿ ಗೆಳೆಯರು [ರಿ }-ಶತಮಾನದ ಸ್ಮರಣೆ - ಕಾಳಿಂಗ ರಾವ್ / ಸರಸ್ವತಿ ಬಾಯಿ ರಾಜವಾಡೆ -7-3-2015